ಬೆಂಗಳೂರು : ರಾಜ್ಯದಲ್ಲಿ ದಿನದಿನ ಹೆಚ್ಚುತ್ತಿರುವ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇಂದು ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 415 ಹೊಸ ಡೆಂಘಿ ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲಿ ಸಕ್ರಿಯೆ ಡೆಂಗ್ಯೂ ಕೇಸ್ಗಳ ಸಂಖ್ಯೆ 415 ಆಗಿದ್ದು, ಬೆಂಗಳೂರಿನಲ್ಲಿ ಕಳೆದು 24 ಗಂಟೆಗಳಲ್ಲಿ 259 ಹೊಸ ಡೆಂಘಿ ಕೇಸ್ ಗಳು ದಾಖಲಾಗಿವೆ. ಇವದುವರೆಗೂ ಬೆಂಗಳೂರಿನಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ 7,729 ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಈ ವರೆಗೆ ಒಟ್ಟು 16,907ಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.
ಅದೇ ರೀತಿಯಾಗಿ ಇಂದು ರಾಜ್ಯದಲ್ಲಿ ಡೆಂಘಿಗೆ ಇಬ್ಬರು ಬಾಲಕಿಯರು ಬಲಿಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ 15 ವರ್ಷದ ಬಾಲಕಿ ಡೆಂಗ್ಯೂ ಜ್ವರದಿಂದ ಸಾವನಪ್ಪಿದ್ದಾಳೆ. ಅದೇ ರೀತಿಯಾಗಿ ಹುಬ್ಬಳ್ಳಿಯಲ್ಲಿ ಡೆಂಗ್ಯೂ ಜ್ವರದಿಂದ ನೆರಳುತ್ತಿದ್ದ 5 ವರ್ಷದ ಬಾಲಕಿ ಸಾವನಪ್ಪಿದ್ದಾಳೆ.