ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಅಕ್ರಮ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಚಿವ ಸಾರಾ ಮಹೇಶ್ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ವಿಶ್ರಾಂತಿ ಪಡೆಯಿರಿ ಎಂದು ಜನನನ್ನು ಚುನಾವಣೆಯಲ್ಲಿ ಸೋಲಿಸಿದ್ದಾರೆ. ಮುಡಾ ಹಗರಣದಲ್ಲಿ ಸುಮ್ಮನೆ ನನ್ನ ಹೆಸರು ತರ್ತೀರಾ ಎಂದು ಕಿಡಿ ಕಾರಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ನಾನು ಒಂದೇ ಒಂದು ಶಿಫಾರಸು ಪತ್ರ ಕೊಟ್ಟಿಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಪ್ರತಿಕ್ರಿಯೆ ನೀಡಿದರು. ಸರ್ಕಾರ ಹೇಳಿರುವ ಸರ್ವೆ ನಂಬರ್ ನಾನೇ ಹುಡುಕಿಸುತ್ತೇನೆ. ಸರ್ವೇ ನಂಬರ್ ಹುಡುಕಿಸಿ ಇವರ ಅವ್ಯವಹಾರ ಬಹಿರಂಗಪಡಿಸುತ್ತೇನೆ. ಆರ್ ಟಿ ಐ ಗೆ ಅರ್ಜಿ ಸಲ್ಲಿಸಿ ಮಾಹಿತಿ ಪಡೆದು ಬಹಿರಂಗಪಡಿಸುತ್ತೇನೆ ಎಂದರು.
ಮುಡಾದಲ್ಲಿ ನಡೆದಿರುವ ಎಲ್ಲಾ ಅವ್ಯವಹಾರ ನನಗೆ ಗೊತ್ತು. ಯಾರ್ಯಾರು ಎಷ್ಟು ಸೈಟ್ ಪಡೆದಿದ್ದಾರೆ ಎನ್ನುವುದು ಎಲ್ಲವೂ ಗೊತ್ತಿದೆ. ಆದರೆ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ವಿಶ್ರಾಂತಿ ಪಡೆಯಿರಿ ಎಂದು ಜನರು ನನ್ನನ್ನು ಸೋಲಿಸಿದ್ದಾರೆ. ವಿಶ್ರಾಂತಿ ಪಡಿತಿದ್ದೇನೆ. ಸುಮ್ಮ ನೆ ನನ್ನ ಹೆಸರು ತರ್ತೀರಾ ಎಂದು ಮೈಸೂರಿನಲ್ಲಿ ಮಾಡಿ ಸಚಿವ ಸಾರಾ ಮಹೇಶ್ ವಾಗ್ದಾಳಿ ನಡೆಸಿದರು.