ಬೆಂಗಳೂರು : ಬೆಂಗಳೂರಿನ ಎಸ್. ಟಿ ಮಾಲ್ ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೂ 18.6 ಕಿ.ಮೀ ‘ಟನಲ್’ ನಿರ್ಮಾಣ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬ್ರಾಂಡ್ ಬೆಂಗಳೂರು ನಿರ್ವಹಣೆ ಮತ್ತು ಕಾಮಗಾರಿ ಕುರಿತ ಸಭೆಯ ಬಳಿಕ ಮಾತನಾಡಿದ ಅವರು, ಬೆಂಗಳೂರಿನ ಅಭಿವೃದ್ಧಿಗೆ 70 ಸಾವಿರ ಸಲಹೆಗಳು ಬಂದಿದ್ದವು. ಬೆಂಗಳೂರಿನಲ್ಲಿ 18.5 ಕಿಲೋಮೀಟರ್ ವರೆಗೂ ಟನಲ್ ನಿರ್ಮಾಣ ಆಗುತ್ತದೆ. ಎಸ್ ಟಿ ಮಾಲ್ ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೂ ಟನಲ್ ನಿರ್ಮಾಣವಾಗುತ್ತದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಇನ್ನು ಮುಂದೆ ಎಲ್ಲೂ ಜಾಗ ಸ್ವಾಧೀನ ಪಡಿಸಿಕೊಳ್ಳಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಡಬಲ್ ಡೆಕ್ಕರ್ ಮೆಟ್ರೋ ಮಾಡಲು ನಿರ್ಧರಿಸಲಾಗಿದೆ. ಕಸ ವಿಲೇವಾರಿಗೆ ನಾಲ್ಕು ಕಡೆ 100 ಎಕರೆ ಜಾಗ ನೋಡುವುದು ಅಥವಾ ಖರೀದಿಸಿ ಕಸ ಬರ್ನ್ ಮಾಡುವ ಬಗ್ಗೆ ಚರ್ಚೆಯಾಗಿದೆ ಟ್ರಾಫಿಕ್ ನಿಯಂತ್ರಣ ಸಂಬಂಧ ಪೊಲೀಸರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.
ಟ್ರಾಫಿಕ್ ನಿಯಂತ್ರಣ ಸಂಬಂಧ ಪೊಲೀಸರಿಗೆ ಸೂಚನೆ ನೀಡಲಾಗಿದೆ. ರಸ್ತೆ ಮಧ್ಯ ವಾಹನ ನಿಲ್ಲಿಸುವಂತಿಲ್ಲ. 17-18 ಕಡೆ ಜಾಗ ಗುರುತಿಸಿದ್ದೇವೆ. ಸಿಗ್ನಲ್ ಫ್ರೀ ಕಾರಿಡಾರ್ ಗೆ 12,000 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಬೆಂಗಳೂರು ನಗರಕ್ಕೆ ಸ್ಕೈ ಡೆಕ್ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿದೆ. ನೈಸ್ ರಸ್ತೆಯಲ್ಲಿ ಒಂದು ಜಾಗ ಮಾಡಿದ್ದೀವಿ ಎಂದು ಅವರು ತಿಳಿಸಿದರು.
ಟ್ರಾಫಿಕ್, ಕಸ, ಕನ್ಸ್ಟ್ರಕ್ಷನ್ , ಎಲಿವೇಟೆಡ್ ಕಾರಿಡಾರ್ ಬಗ್ಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ನಿರ್ಧಾರ ಕೈಗೊಳ್ಳುವ ಮುನ್ನ ಶಾಸಕರ ಜೊತೆ ಚರ್ಚಿಸುವ ಮಾತು ಕೊಟ್ಟಿದ್ದೇನೆ. ಇತ್ತೀಚಿಗಷ್ಟೇ ಸಂಬಂಧಿಸಿದ ನಾಲ್ಕು ಬೋರ್ಡ ಜೊತೆಗೂ ಮಾತನಾಡಿದ್ದೇನೆ. ಎರಡು ಲೈನ್ ಪ್ರಪೋಸ್ ಮಾಡಿದ್ದೀನಿ. ಅದನ್ನು ಅವರಿಗೆ ಮಾಡಿದಟ್ಟು ಮಾಡಿದ್ದೇನೆ ಎಂದರು. ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು, ಬೆಂಗಳೂರಿನ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.