ನವದೆಹಲಿ : ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ ಸರ್ಕಾರದ ಪತನ ಶುರುವಾಗಿದ್ದು, 2028 ಕ್ಕೆ ಮತ್ತೆ ರಾಮನಗರ ಎಂದು ಮರುನಾಮಕರಣ ಮಾಡುತ್ತೇವೆ. ಅಲ್ಲಿವರೆಗೆ ಅವರು ಖುಷಿಯಾಗರಲಿ , ರಾಮನಗರದ ಇತಿಹಾಸ ಗೊತ್ತಿದ್ಯಾ? ಇತಿಹಾಸಗೊತ್ತಿದ್ದರೆ ಅದನ್ನು ತೆಗೆಯುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆ ಎಂದು ಹೆಸರು ಇಟ್ಟಾಗ ಏಕೆ ವಿರೋಧಿಸಲಿಲ್ಲ. ವಿಧಾನಸಭೆಯಲ್ಲಿ ಏಕೆ ಮಾತನಾಡಲಿಲ್ಲ. ಜಿಲ್ಲೆಯ ಹೆಸರು ಬದಲಾಯಿಸಲು ಅರ್ಜಿ ಕೊಟ್ಟವರು ಯಾರು? ಜಿಲ್ಲೆಯ ಹೆಸರು ಬದಲಾಯಿಸಿದ್ರೆ ಏನು ಸಿಗುತ್ತದೆ. ರಾಮನಗರ ಈಗಾಗಲೇ ಅಭಿವೃದ್ಧಿ ಆಗಿದೆ. ಜಿಲ್ಲೆಯ ಹೆಸರು ಬದಲಾಯಿಸಿ ಭೂಮಿಯ ಬೆಲೆ ಹೆಚ್ಚಿಸಬೇಕಾ? ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿದೆಯಾ? ಏನು ಅಭಿವೃದ್ಧಿ ಮಾಡಿದ್ರೆ ಏನು ಪ್ರಯೋಜನ ಬಂತು ಎಂದು ಕಿಡಿಕಾರಿದ್ದಾರೆ.