ರಾಯಚೂರು : ಜಿಲ್ಲೆಯ ಸಿರವಾರದಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಒಬ್ಬರು ಪ್ರೇಯಸಿಯೊಂದಿಗೆ ಇದ್ದಾಗಲೇ ರೆಡ್‌ಹ್ಯಾಂಡಾಗಿ ಪತ್ನಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಪತ್ನಿಗೆ ಕೈಕೊಟ್ಟು ಪ್ರೇಯಸಿಯೊಂದಿಗೆ ವಾಸಿಸುತ್ತಿದ್ದ ಹೆಡ್ ಕಾನ್‌ಸ್ಟೇಬಲ್ ರಾಜ್ ಮಹಮ್ಮದ್ ಸಿಕ್ಕಿಬಿದ್ದಿದ್ದಾನೆ.
ಹೌದು ಕಳೆದ 4 ವರ್ಷಗಳಿಂದ ಪತ್ನಿಯನ್ನು ದೂರ ಮಾಡಿ ಪ್ರೇಯಸಿಯೊಂದಿಗೆ ಎಂಜಾಯ್ ಮಾಡುತ್ತ ಕಾಲ ಕಳೆಯುತ್ತಿದ್ದ ಹೆಡ್ ಕಾನ್‌ಸ್ಟೇಬಲ್ ರಾಜ್ ಮೊಹಮ್ಮದ್ ಇದೀಗ ಲಾಕ್ ಆಗಿದ್ದಾನೆ. ಕದ್ದು ಮುಚ್ಚಿ ಪ್ರೇಯಿಸಿ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದ ಹೆಡ್ಕಾನ್ಸ್ಟೇಬಲ್ನನ್ನು ಪತ್ನಿಯೇ ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಅಲ್ಲದೇ ಇಬ್ಬರನ್ನೂ ಲಾಕ್ ಮಾಡಿ ಎಸ್ಪಿಗೆ ದೂರು ನೀಡಿದ್ದಾರೆ.
ಗಂಡ ಸಿರವಾರ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿದ್ದರೆ, ಹೆಂಡ್ತಿ ದೇವದುರ್ಗ ಠಾಣೆ ಕಾನ್ಸ್ ಟೇಬಲ್ ಆಗಿದ್ದಾರೆ. ಇಬ್ಬರು ಅನ್ಯೂನ್ಯವಾಗಿದ್ದರು. ಆದ್ರೆ, ಹೆಡ್ಕಾನ್ಸ್ಟೇಬಲ್ ರಾಜ್ ಮೊಹಮ್ಮದ್ ಬೇರೆ ಹೆಣ್ಮಗಳ ಪ್ರೀತಿಯ ಬಲೆಗೆ ಬಿದ್ದಿದ್ದು, ಇದೀಗ ರಾಜ್ ಮೊಹಮ್ಮದ್ ಮನೆಯೊಂದರಲ್ಲಿ ಪ್ರೇಯಸಿ ಜೊತೆ ಚೆಲ್ಲಾಟವಾಡುವಾಗಲೇ ಹೆಂಡ್ತಿ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ರಾಜ್ ಮೊಹಮ್ಮದ್ , ಪ್ರೇಯಸಿಗಾಗಿ ಕಳೆದ 4 ವರ್ಷಗಳಿಂದ ಪತ್ನಿಯನ್ನು ದೂರ ಮಾಡಿದ್ದ ಎಂದು ಆರೋಪಿಸಲಾಗಿದೆ. ಆದ್ರೆ, ಈ ಬಾರಿ ಹೆಡ್ಕಾನ್ಸ್ಟೇಬಲ್ ರಾಜ್ ಮೊಹಮ್ಮದ್, ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ಮನೆಯೊಂದರಲ್ಲಿ ಪ್ರೇಯಸಿ ಜೊತೆ ಇರುವಾಗಲೇ ಪತ್ನಿ ಪ್ಯಾರಿ ಬೇಗಂ ಲಾಕ್ ಮಾಡಿದ್ದು, ಬಳಿಕ ಕರೆ ಮಾಡಿ ಎಸ್ಪಿಗೆ ದೂರು ನೀಡಿದ್ದಾರೆ.
ಎಸ್ಪಿ ಸೂಚನೆಯ ಮೇರೆಗೆ ಸ್ಥಳಕ್ಕೆ ಬಂದ ಸಿರವಾರ ಠಾಣೆ ಪಿಎಸ್ಐ ಗುರುಚಂದ್ರ ಯಾದವ್ ಮನೆ ಬೀಗ ಓಪನ್ ಮಾಡಿಸಿ ಇಬ್ಬರನ್ನೂ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪತಿಯ ಕಳ್ಳಾಟಕ್ಕೆ ಬೇಸತ್ತ ಮಹಿಳಾ ಪೇದೆ ನನಗೆ ನ್ಯಾಯ ಬೇಕು ಅಂತಾ ಆಗ್ರಹಿಸಿದ್ದಾರೆ.