ಬೆಂಗಳೂರು : ಸಮಾಜದಲ್ಲಿ ಇನ್ನು ಮೌಢ್ಯಗಳು ಇವೆ. ವಿದ್ಯಾವಂತರೇ ಮೌಢ್ಯವನ್ನು ನಂಬುತ್ತಿದ್ದಾರೆ. ಎಲ್ಲಿವರೆಗೂ ಮೌಢ್ಯಗಳು ಇರುತ್ತವೆಯೋ ಅಲ್ಲಿಯವರೆಗೂ ಸಾಮಾಜಿಕ ನ್ಯಾಯ ತರುವುದಕ್ಕೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ವಿಧಾನಸೌಧದ ಸಭಾಪತಿಗಳ ಕೊಠಡಿಯಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ಆಯೋಜಿಸಿದ್ದ ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪ ಭಾವಚಿತ್ರವನ್ನು ವಿಧಾನ ಪರಿಷತ್ ಸದಸ್ಯರಿಗೆ ನೀಡುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಸವಣ್ಣನವರು ಸಮಾಜದ ಬದಲಾವಣೆ ಬಯಸಿದ್ದರು, ಮೂಢನಂಬಿಕೆ ಇರಬಾರದು ಅಂತ ಹೇಳಿದ್ದರು. ಎಲ್ಲಿವರೆಗೂ ಮೌಢ್ಯಗಳು ಇರುತ್ತವೆಯೋ ಅಲ್ಲಿಯವರೆಗೂ ಸಾಮಾಜಿಕ ನ್ಯಾಯ ತರುವುದಕ್ಕೆ ಆಗುವುದಿಲ್ಲ ಎಂದರು.
850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಅನುಭವ ಮಂಟಪ ಮಾಡಿದ್ದರು. ಅಂದಿನ ಕಾಲದಲ್ಲೇ ಅನುಭವ ಮಂಟಪ ಮಾಡಿ ಅದರ ಮುಖಾಂತರ ಸಮಾಜದ ಆನೇಕ ಸಮಸ್ಯೆ ಚೆರ್ಚೆ ಆಗುವಂತೆ ಮಾಡಲಾಗಿತ್ತು. ಸಮಾಜದ ಬದಲಾವಣೆ ಬಗ್ಗೆ ಚೆರ್ಚೆ ಹಾಗೂ ಸಮಾಜಕ್ಕೆ ಒಳಿತು ಆಗುವುದರ ಬಗ್ಗೆ ಚೆರ್ಚೆ ಆಗುತ್ತಿತ್ತು. ಬಸವಣ್ಣ ಅವರು ಸಾಮಾಜಿಕ ಕ್ರಾಂತಿ ಮಾಡಿದ್ದರು. ಅದರ ನಿಮಿತ್ತ ಇಂದು ಅನುಭವ ಮಂಟಪ ನಿರ್ಮಿಸಲಾಗುತ್ತಿದೆ ಎಂದರು.
ಬಸವಣ್ಣ ಅವರನ್ನು ಸಂಸ್ಕೃತಿ ನಾಯಕ ಹಾಗೂ ಬಸವಣ್ಣ ಭಾವಚಿತ್ರ ಎಲ್ಲಾ ಸರ್ಕಾರಿ ಹಾಗೂ ಅನುಧಾನಿತಾ ಕಚೇರಿಯಲ್ಲಿ ಹಾಕಬೇಕು ಅಂತ ಹೇಳಿದ್ದೆವು. ನಾನು ಕೌನ್ಸಿಲ್ನಲ್ಲಿ ಬಸವಣ್ಣನವರ ಫೋಟೋ ಇಡಬೇಕು ಅಂಥ ಹೇಳಿದ್ದೆ ಆದರೆ, ಸಭಾಪತಿ ಎಲ್ಲಾ ಶಾಸಕರಿಗೂ ಹಂಚುವ ಪ್ರಯತ್ನ ಮಾಡಬೇಕು ಅಂತ ಹೇಳಿದರು.ಹಾಗಾಗಿ ಎಲ್ಲಾ ಶಾಸಕರಿಗೂ ಭಾವಚಿತ್ರ ಕೊಡಲಾಗುತ್ತದೆ ನಾನು ಉದ್ಘಾಟನೆ ಮಾಡಿದ್ದಕ್ಕೆ ಸಂತೋಷ ಆಗಿದೆ ಇದರಿಂದ ನಮಗೆ ಸ್ಫೂರ್ತಿ ಆಗಿದೆ ಎಲ್ಲಾ ಶಾಸಕರಿಗೂ ಬಸವಣ್ಣ ಸ್ಫೂರ್ತಿ ಕೊಡಲಿ ಎಲ್ಲರೂ ಬಸವಣ್ಣ ಅವರ ತತ್ವ ಅಳವಡಿಸಿಕೊಳ್ಳಲಿ ಎಂದರು.