Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಳೆಯಲ್ಲಿ ಆಟವಾಡಲು ಹೋಗ್ತೀನಿ ಎಂದಿದ್ದಕ್ಕೆ 10 ವರ್ಷದ ಸ್ವಂತ ಮಗನನ್ನೇ ಇರಿದು ಕೊಂದ ಪಾಪಿ ತಂದೆ

30/06/2025 9:45 PM

ಕುವೆಂಪು ವಿವಿಯಲ್ಲಿ 16ನೇ ಸಹ್ಯಾದ್ರಿ ಚಲನಚಿತ್ರೋತ್ಸವ ಆರಂಭ: 5 ದಿನ ಪೂರ್ವ ಏಷ್ಯಾದ ಸಿನಿಮಾ ಪ್ರದರ್ಶನ

30/06/2025 9:35 PM

ಹೃದಯ ವಿದ್ರಾವಕ ದುರಂತ ; ಕಡಲೆಕಾಯಿ ಕುದಿಸುತ್ತಿದ್ದ ಪಾತ್ರೆಗೆ ಬಿದ್ದು 1 ವರ್ಷದ ಮಗು ದುರ್ಮರಣ

30/06/2025 9:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಕಿದ್ದವರಿಗೆ ‘BBMP’ ಶಾಕ್: ‘142 FIR’ ದಾಖಲು
KARNATAKA

ಬೆಂಗಳೂರಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಕಿದ್ದವರಿಗೆ ‘BBMP’ ಶಾಕ್: ‘142 FIR’ ದಾಖಲು

By kannadanewsnow0924/07/2024 5:29 PM

ಬೆಂಗಳೂರು: ನಗರದಲ್ಲಿ ಅನಧಿಕೃತ ಫ್ಲೆಕ್ಸ್ ಗಳ ತೀವ್ರ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ನಡೆಸುತ್ತಿದೆ. ಇದೀಗ 8362ಕ್ಕೂ ಹೆಚ್ಚು ಫ್ಲೆಕ್ಸ್ ತೆರವು ಮಾಡಿದ್ದು, ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಕಿದ್ದವರ ವಿರುದ್ಧ 142 ಎಫ್.ಐ.ಆರ್ ದಾಖಲು ಮಾಡಿದೆ.

ಈ ಕುರಿತಂತೆ ಬಿಬಿಎಂಪಿಯ ಜಾಹೀರಾತು ವಿಭಾಗದ ಉಪ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್/ಬ್ಯಾನರ್ಸ್ ಅಳವಡಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಇದುವರೆಗೆ 8362ಕ್ಕೂ ಹೆಚ್ಚು ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗಿದ್ದು, ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ 267 ದೂರುಗಳ ಪೈಕಿ 142 ಎಫ್‌ಐಆರ್ ದಾಖಲಿಸಲಾಗಿದೆ ಎಂದಿದ್ದಾರೆ.

ನಗರದಲ್ಲಿ ಯಾವುದೇ ರೀತಿಯ ಅನಧಿಕೃತ ಜಾಹೀರಾತುಗಳಿರದಂತೆ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ ಶಿವಕುಮಾರ್ ರವರು ಕಟ್ಟುನಿಟ್ಟಿನ ನಿರ್ದೇಶನ ನೀಡಿರುತ್ತಾರೆ. ಈ ಸಂಬಂಧ ಎಲ್ಲಾ ವಲಯದಲ್ಲೂ ಅನಧಿಕೃತ ಜಾಹೀರಾತುಗಳು ಇರದಂತೆ ನೋಡಿಕೊಳ್ಳಲು ಹಾಗೂ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಮುಖ್ಯ ಆಯುಕ್ತರು ಸೂಚನೆ ನೀಡಿರುತ್ತಾರೆ. ಅಲ್ಲದೆ ಅನಧಿಕೃತ ಜಾಹೀರಾತುಗಳನ್ನು ಅಳವಡಿಸುವ ವಿಚಾರವಾಗಿ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ವಲಯ ಹಿರಿಯ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಿ ವರದಿ ಪಡೆಯುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಅದರಂತೆ, ನಗರದಾದ್ಯಂತ ದಿನಾಂಕ: 01-06-2024 ರಿಂದ ಇದುವೆರೆಗೆ 8362 ಫ್ಲೆಕ್ಸ್/ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದ್ದು, ಪೊಲೀಸ್ ಠಾಣೆಯಲ್ಲಿ 267 ದೂರುಗಳನ್ನು ದಾಖಲಿಸಲಾಗಿದೆ. 142 ಎಫ್.ಐ.ಆರ್ ಗಳನ್ನು ದಾಖಲಿಸಲಾಗಿದ್ದು, 1,03,000 ರೂ. ದಂಡ ವಿಧಿಸಲಾಗಿದೆ ಅಂತ ತಿಳಿಸಿದ್ದಾರೆ.

ಅನಧಿಕೃತ ಜಾಹೀರಾತು ಅಳವಡಿಸಿದರೆ ಕಾನೂನು ಕ್ರಮ

ನಗರದಲ್ಲಿ ಅನಧಿಕೃತವಾಗಿ ಅಳವಡಿಸುವ ಜಾಹೀರಾತುಗಳು ಅಳಡಿಸುವುದರಿಂದ ನಾಗರೀಕರಿಗೆ ಸಾಕಷ್ಟು ಅನಾನುಕೂಲವಾಗಲಿದೆ. ಎಲ್ಲೆಂದರಲ್ಲಿ ಜಾಹೀರಾತು ಫಲಕಗಳು ಅಳವಡಿಸುವುದರಿಂದ ಪ್ರಾಣಿಹಾನಿಯಾಗುವ ಸಂಭವವೂ ಹೆಚ್ಚಿರುತ್ತದೆ. ಈ ಸಂಬಂಧ ಅನಧಿಕೃತವಾಗಿ ಜಾಹೀರಾತು ಅಳವಡಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ.

ಜನ್ಮ ದಿನಾಚರಣೆ ಹಾಗೂ ಶುಭ ಹಾರೈಕೆಗಳ ಫ್ಲೆಕ್ಸ್ ಗಳನ್ನು ಅಳವಡಿಸದಿರಲು ಮನವಿ:

ನಗರದ ಪ್ರಮುಖ ರಸ್ತೆಗಳ ಬದಿ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯಗಳ ಫ್ಲೆಕ್ಸ್‌ಗಳನ್ನು ಹೆಚ್ಚು ಅಳವಡಿಸಲಾಗುತ್ತಿದೆ‌. ಈ ಸಂಬಂಧ ಯಾವುದೇ ಶುಭಾಶಯಗಳ ಕುರಿತ ಅನಧಿಕೃತ ಫ್ಲೆಕ್ಸ್/ಬ್ಯಾನರ್ ಗಳನ್ನು ಅಳವಡಿಸದಂತೆ ಪಾಲಿಕೆಯು ನಾಗರೀಕರಲ್ಲಿ ಮನವಿ ಮಾಡುತ್ತಿದೆ. ನಗರದ ರಸ್ತೆ ಬದಿ, ಪಾದಚಾರಿ ಮಾರ್ಗ, ಜಂಕ್ಷನ್ ಗಳು, ಮೇಲುಸೇತುವೆಗಳಲ್ಲಿ ಅನಧಿಕೃತ ಫ್ಲೆಕ್ಸ್/ಬ್ಯಾನರ್ ಅಳವಡಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

ಪೊಲೀಸ್ ಅಧಿಕಾರಿಗಳ ಸಹಕಾರ:

ನಗರದಲ್ಲಿ ಅನಧಿಕೃತ ಜಾಹೀರಾತುಗಳ ತೆರವು ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳು ಸಹ ಪಾಲಿಕೆಯ ಜೊತೆ ಕೈ ಜೋಡಿಸಿ ಅನಧಿಕೃತ ಜಾಹೀರಾತುಗಳ ತೆರವು ಕಾರ್ಯಾಚರಣೆಯಲ್ಲಿ ಸಹಕಾರ ನೀಡುತ್ತಿದ್ದಾರೆ‌.

ದೂರವಾಣಿ 1533ಗೆ ಕರೆ ಮಾಡಿ ಅಥವಾ ವಾಟ್ಸಪ್ ಸಂಖ್ಯೆ 9480683939 ಗೆ ಛಾಯಾಚಿತ್ರದ ಸಮೇತ ದೂರು ನೀಡಿ:

ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳ ಕುರಿತು ನಾಗರೀಕರು ಪಾಲಿಕೆ ಸಹಾಯವಾಣಿ ಸಂಖ್ಯೆಯಾದ 1533 ಅಥವಾ ಜಾಹೀರಾತು ವಿಭಾಗದ ವ್ಯಾಟ್ಸಪ್ ಸಂಖ್ಯೆ 9480683939 ಗೆ ಛಾಯಾಚಿತ್ರ ಅಥವಾ ವೀಡಿಯೋ ಮಾಡಿ ವಿಳಾಸ ಸಹಿತ ಕಳುಹಿಸಿದಲ್ಲಿ ಪಾಲಿಕೆ ವತಿಯಿಂದ ತ್ವರಿತಗತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

‘ಕೇಂದ್ರ ಸರ್ಕಾರ’ ಹಳೇ ಚಾಳಿಯನ್ನೇ ಮುಂದುವರೆಸಿದೆ: ಶಾಸಕ ಕೆ.ಎಂ.ಉದಯ್ ಕಿಡಿ

ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ‘ಗ್ರಾಮಠಾಣ’ ಒಳಗಿನ, ಹೊರಗಿನ ‘ಆಸ್ತಿ ಅಳತೆ’ಗೆ ಅವಕಾಶ

Share. Facebook Twitter LinkedIn WhatsApp Email

Related Posts

ಕುವೆಂಪು ವಿವಿಯಲ್ಲಿ 16ನೇ ಸಹ್ಯಾದ್ರಿ ಚಲನಚಿತ್ರೋತ್ಸವ ಆರಂಭ: 5 ದಿನ ಪೂರ್ವ ಏಷ್ಯಾದ ಸಿನಿಮಾ ಪ್ರದರ್ಶನ

30/06/2025 9:35 PM2 Mins Read

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವಿನ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸಿ ವರದಿ ನೀಡಲು ಆದೇಶ: ಸಚಿವ ದಿನೇಶ್ ಗುಂಡೂರಾವ್

30/06/2025 9:28 PM1 Min Read

ಬೆಂಗಳೂರಲ್ಲಿ ಇ-ಖಾತಾ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್: 2 ದಿನಗಳಲ್ಲಿ 1,259 ವಿತರಣೆ | BBMP E-Khata Mela

30/06/2025 8:37 PM1 Min Read
Recent News

ಮಳೆಯಲ್ಲಿ ಆಟವಾಡಲು ಹೋಗ್ತೀನಿ ಎಂದಿದ್ದಕ್ಕೆ 10 ವರ್ಷದ ಸ್ವಂತ ಮಗನನ್ನೇ ಇರಿದು ಕೊಂದ ಪಾಪಿ ತಂದೆ

30/06/2025 9:45 PM

ಕುವೆಂಪು ವಿವಿಯಲ್ಲಿ 16ನೇ ಸಹ್ಯಾದ್ರಿ ಚಲನಚಿತ್ರೋತ್ಸವ ಆರಂಭ: 5 ದಿನ ಪೂರ್ವ ಏಷ್ಯಾದ ಸಿನಿಮಾ ಪ್ರದರ್ಶನ

30/06/2025 9:35 PM

ಹೃದಯ ವಿದ್ರಾವಕ ದುರಂತ ; ಕಡಲೆಕಾಯಿ ಕುದಿಸುತ್ತಿದ್ದ ಪಾತ್ರೆಗೆ ಬಿದ್ದು 1 ವರ್ಷದ ಮಗು ದುರ್ಮರಣ

30/06/2025 9:28 PM

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವಿನ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸಿ ವರದಿ ನೀಡಲು ಆದೇಶ: ಸಚಿವ ದಿನೇಶ್ ಗುಂಡೂರಾವ್

30/06/2025 9:28 PM
State News
KARNATAKA

ಕುವೆಂಪು ವಿವಿಯಲ್ಲಿ 16ನೇ ಸಹ್ಯಾದ್ರಿ ಚಲನಚಿತ್ರೋತ್ಸವ ಆರಂಭ: 5 ದಿನ ಪೂರ್ವ ಏಷ್ಯಾದ ಸಿನಿಮಾ ಪ್ರದರ್ಶನ

By kannadanewsnow0930/06/2025 9:35 PM KARNATAKA 2 Mins Read

ಶಿವಮೊಗ್ಗ: ಸಿನಿಮಾಗಳು ಕೇವಲ ದೃಶ್ಯ ಕಥಾನಕಗಳಲ್ಲ. ಅವು ಜೀವನದ ಸಣ್ಣ ತುಣುಕುಗಳು. ದೃಶ್ಯ, ಧ್ವನಿ, ಸಂಗೀತ, ಪಾತ್ರ ಮತ್ತು ದೃಶ್ಯ…

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವಿನ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸಿ ವರದಿ ನೀಡಲು ಆದೇಶ: ಸಚಿವ ದಿನೇಶ್ ಗುಂಡೂರಾವ್

30/06/2025 9:28 PM

ಬೆಂಗಳೂರಲ್ಲಿ ಇ-ಖಾತಾ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್: 2 ದಿನಗಳಲ್ಲಿ 1,259 ವಿತರಣೆ | BBMP E-Khata Mela

30/06/2025 8:37 PM

SHOCKING: ಹಾಸನದಲ್ಲಿ ಆಟೋ ಚಲಾವಣೆ ವೇಳೆಯೇ ಹೃದಯಾಘಾತದಿಂದ ವ್ಯಕ್ತಿ ಸಾವು: ಇಂದು ಒಂದೇ ದಿನ ನಾಲ್ವರು ಬಲಿ

30/06/2025 8:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.