ಬೆಂಗಳೂರು : ಕೋ ಕೋ ಟೂರ್ನಮೆಂಟ್ ವೇಳೆ ಸರಿಯಾಗಿ ತೀರ್ಪು ಕೊಟ್ಟಿಲ್ಲವೆಂದು ತೀರ್ಪುಗಾರರಿಗೆ ಬೆದರಿಸಲು ಪುಂಡರು ಮಾರಕಹಸ್ತ್ರಗಳನ್ನು ಹಿಡಿದು ಮೈದಾನಕ್ಕೆ ಇಳಿದ ಘಟನೆ ಬೆಂಗಳೂರಿನ ಕೊತ್ತನೂರು ಸರ್ಕಾರಿ ಶಾಲಾ ಆವರಣದಲ್ಲಿ ನಡೆದಿದೆ.
ಹೌದು ನಿನ್ನೆ ಈ ಒಂದು ಘಟನೆ ನಡೆದಿದ್ದು, ಶಾಲಾ ಮಕ್ಕಳ ಮುಂದೆ ಮಾರಾಕಸ್ತ್ರಗಳನ್ನು ಹಿಡಿದು ದಾಂದಲೆ ಮಾಡಿರುವ ಘಟನೆ ಬೆಂಗಳೂರಿನ ಕೊತ್ತನೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಟೂರ್ನಮೆಂಟ್ ವೇಳೆ ಡ್ಯಾಗರ್ ಕ್ರಿಕೆಟ್ ಸ್ಂಪ್ ಹಿಡಿದು ಓಡಾಟ ಮಾಡಿದ್ದಾರೆ. ಬೇರೆ ಏರಿಯಾದಿಂದ ಬಂದ ಯುವಕರು ಮಾರಕಾಸ್ತ್ರಗಳನ್ನು ಹಿಡಿದು ಕಿರಿಕ್ ಮಾಡಿದ್ದಾರೆ.
ಶಾಲಾ ಮಕ್ಕಳ ಮುಂದೆ ಮಾರಕಸ್ತ್ರಗಳನ್ನು ಹಿಡಿದು ದಾಂದಲೆ ನಡೆಸಿದ್ದಾರೆ. ಟೂರ್ನಮೆಂಟ್ ವೇಳೆ ಡ್ಯಾಗರ್ ಹಾಗೂ ವಿಕೆಟ್ ಹಿಡಿದು ಓಡಾಟ ನಡೆಸಿದ್ದಾರೆ. ಸರಿಯಾಗಿ ತೀರ್ಪು ಕೊಟ್ಟಿಲ್ಲ ಅಂತ ಯುವಕರು ರೊಚ್ಚಿಗೆದ್ದಿದ್ದಾರೆ. ತೀರ್ಪುಗಾರರನ್ನು ಬೆದರಿಸಲು ಮಾರಕಾಸ್ತ್ರಗಳನ್ನು ಹಿಡಿದು ಓಡಾಡಿದ್ದಾರೆ.ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.