ಶಿವಮೊಗ್ಗ: ಜಿಲ್ಲೆಯಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಲ್ಯಾಬ್ ಟೆಕ್ನೀಷಿಯನ್ ಒಬ್ಬರು ಶಂಕಿತ ಡೆಂಗ್ಯೂಗೆ ಬಲಿಯಾಗಿದ್ದರು. ಈ ಬೆನ್ನಲ್ಲೇ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಒಬ್ಬರು ಇಂದು ಬಲಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಹೇಮಾ(45) ಎಂಬುವರು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಂತ ಅವರಿಗೆ ಡೆಂಗ್ಯೂ ಪಾಸಿಟಿವ್ ಅಂತ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು.
ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೇಮಾ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ಮೆಗ್ಗಾನ್ ಆಸ್ಪತ್ರೆಯ ಸ್ಟಾಫ್ ನರ್ಸ್ ಹೇಮಾ ಅವರು ಇಂದು ಶಂಕಿತ ಡೆಂಗ್ಯೂವಿನಿಂದ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಶಂಕಿತ ಡೆಂಗ್ಯೂಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸ್ಟಾಫ್ ನರ್ಸ್ ಬಲಿಯಾದಂತೆ ಆಗಿದೆ.
Good News: ‘ಅಂಗನವಾಡಿ ಕಾರ್ಯಕರ್ತೆ’ಯರಿಗೆ ಸಿಹಿಸುದ್ದಿ: ಶೀಘ್ರವೇ ‘ಗೌರವ ಧನ’ ಹೆಚ್ಚಳ | Anganwadi Workers
BREAKING : ಬೆಂಗಳೂರಲ್ಲಿ ಯುವತಿಯ ಭೀಕರ ಕೊಲೆ : ಪಿಜಿಗೆ ನುಗ್ಗಿ ಪ್ರಿಯತಮೆಯನ್ನೇ ಹತ್ಯೆಗೈದ ಯುವಕ!