ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಯುವತಿಯೊರ್ವಳ ಭೀಕರ ಕೊಲೆ ನಡೆದಿದ್ದು, ಮದುವೆಯಾಗು ಎಂದಿದ್ದಕ್ಕೆ ಪ್ರಿಯತಮೆಯನ್ನ ಕತ್ತು ಹಿಸುಕಿ ಪ್ರಿಯಕರ ಭೀಕರವಾಗಿ ಕೊಲೆ ಮಾಡಿ ಶವವನ್ನು ಹೂತಿಟ್ಟ ಘಟನೆ ಹೊಸನಗರದ ಹೆದ್ದಾರಿಪುರ ಬಳಿ ನಡೆದಿದೆ.
ಕೊಲೆಯಾದ ಯುವತಿಯನ್ನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೊಲದ ಸೌಮ್ಯ ಎಂದು ತಿಳಿದುಬಂದಿದ್ದು, ಮದುವೆ ಆಗುವಂತೆ ಹೇಳಿದ್ದಕ್ಕೆ ಸೌಮ್ಯಳನ್ನು ಸೃಜನ್ ಎನ್ನುವ ಯುವಕ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಆರೋಪಿ ಸೃಜನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಸೌಮ್ಯ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಸೃಜನ್ ಫೈನಾನ್ಸ್ ಅಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರ ನಡುವೆ ಪರಿಚಯದ ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು. ಕೊಪ್ಪದಲ್ಲಿ ಆಗಾಗ ಹೋಗಿ ಬರುತ್ತಿದ್ದ. ಈ ವೇಳೆ ಇಬ್ಬರ ಪರಿಚಯವಾಗಿದೆ ಪರಿಚಯ ಪ್ರೀತಿಗೆ ತಿರುಗಿದೆ.ಯುವತಿ ಜಾತಿ ಬೇರೆ ಎಂದು ಯುವಕನ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸೃಜನ್ ಮನೆಯವರು ಮದುವೆಗೆ ವಿರೋಧಿಸಿದ್ದರು.
ಮನೆಗೆ ಕರೆದೊಯ್ಯುವಂತೆ ಸೌಮ್ಯ ಸೃಜನನಿಗೆ ಒತ್ತಡ ಹಾಕಿದ್ದಾಳೆ. ಈಗ ಬರಬೇಡ ವಾಪಸ್ ಹೋಗು ಎಂದು ಸೃಜನ್ ಹೇಳಿದ್ದ. ಹೆದ್ದಾರಿಪುರಕ್ಕೆ ಬಂದಿದ್ದ ಸೌಮ್ಯ ಜೊತೆ ಸೃಜನ್ ಜಗಳ ಮಾಡಿದ್ದಾನೆ. ಈ ವೇಳೆ ಸೃಜನ್ ಬಲವಾಗಿ ಹಲ್ಲೆ ಮಾಡಿದ್ದಕ್ಕೆ ಸೌಮ್ಯ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ. ಸೃಜನ್ ಶವವನ್ನು ತೀರ್ಥಹಳ್ಳಿಯಿಂದ ಹೆದಾರಿಪುರದ ಮುಂಬಾಳು ಎಂಬಲ್ಲಿ ಶವ ಸಾಗಿಸಿ ಹೂತಿಟ್ಟಿದ್ದಾನೆ.
ಆರೋಪಿಯನ್ನು ಬಂಧಿಸಿದ ನಂತರ ಪೊಲೀಸರು ಇದೀಗ ಎಸಿ ಸಮುಖದಲ್ಲಿ ಹೊರಗೆ ತೆಗೆಯಲು ಸಿದ್ಧತೆ ನಡೆಸಲಾಗುತ್ತಿದ್ದಾರೆ. ಮುಂಬಾಳು ಬಳಿ ಶವ ಹೂತಿಟ್ಟ ಸ್ಥಳದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಕೊಪ್ಪ ಪೊಲೀಸರಿಂದ ಸೌಮ್ಯ ಶವ ಹೊರತೆಗೆಯಲು ಸಿದ್ಧತೆ ಮಾಡಿಕೊಳಲಾಗುತ್ತಿದೆ.