ಚಿಕ್ಕಮಗಳೂರು: ಶೃಂಗೇರಿ ಶಾರದಾ ಪೀಠಕ್ಕೆ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಆಡಳಿತ ಮಂಡಳಿ ಮಹತ್ವದ ಮಾಹಿತಿ ನೀಡಿದ್ದು, ಇನ್ಮುಂದೆ ಈ ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚನೆ ನೀಡಿದೆ.
ಶೃಂಗೇರಿ ಶಾರದಾ ಪೀಠಕ್ಕೆ ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಆಗಸ್ಟ್ 15ರಿಂದ ವಸ್ತ್ರ ಸಂಹಿತೆ ಜಾರಿಯಾಗಲಿದ್ದು, ಭಾರತೀಯ ಸಂಪ್ರದಾಯದ ಉಡುಪು ಧರಿಸಿ ಬಂದ್ರೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು
ಪೀಠ ಆಡಳಿತಾಧಿಕಾರಿ ಪ್ರಕಟಣೆ ಹೊರಡಿಸಿದೆ.
ಭಾರತೀಯ ಸಂಪ್ರದಾಯವಲ್ಲದ ಅಥವಾ ದೇವಾಲಯದ ಆಡಳಿತ ಮಂಡಳಿ ತಿಳಿಸಿದ ಉಡುಪು ಧರಿಸದೇ ಬಂದರೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ದೇವಸ್ಥಾನದ ಆವರಣ, ತುಂಗಾ ತೀರ, ಕಪ್ಪೆ ಶಂಕರನ ಗುಡಿ ಇಲ್ಲಿಗೆ ಯಾವುದೇ ನಿಯಮಗಳು ಅನ್ವಯವಾಗುವುದಿಲ್ಲ. ಶಾರದಾ ತಾಯಿಯ ದರ್ಶನ ಮಾಡಲು ಮಾತ್ರ ಈ ನಿಯಮ ಕಡ್ಡಾಯ ಮಾಡಲಾಗಿದೆ.