ಬೆಂಗಳೂರು : ಸದ್ಯ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿಯವರೆಗೂ ರಾಜ್ಯದಲ್ಲಿ ಒಟ್ಟು ಡೆಂಘಿ ಪ್ರಕರಣಗಳ ಸಂಖ್ಯೆ 15,000 ಗಡಿ ದಾಟಿದೆ.
ಹೌದು ರಾಜ್ಯದಲ್ಲಿ ಮಂಗಳವಾರ 469 ಡೆಂಘಿ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,384 ತಲುಪಿದೆ. ಇದರೊಂದಿಗೆ ಈವರೆಗಿನ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 15 ಸಾವಿರ ಗಡಿ ದಾಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 3,371 ಶಂಕಿತ ಡೆಂಘಿ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಬೆಂಗಳೂರಿನಲ್ಲಿ 229, ಹಾಸನ 28, ವಿಜಯಪುರ 23, ಬೆಳಗಾವಿ 21, ಚಿತ್ರದುರ್ಗ 20 ಸೇರಿ 469 ಮಂದಿ ಡೆಂಘಿ ಪ್ರಕರಣಗಳು ವರದಿಯಾಗಿದ್ದು, ಈವರೆಗೂ 15,101 ಮಂದಿ ಡೆಂಘ ಜ್ವರದಿಂದ ಬಳಲಿದ್ದಾರೆ. 640 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 2,744 ಮಂದಿ ಮನೆ ಆರೈಕೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.