ಶಿವಮೊಗ್ಗ: ಜಿಲ್ಲೆಯಲ್ಲಿ ಸಹಕಾರ ಸಂಘಕ್ಕೆ ಪಿಗ್ಮಿ, ಶೇರು ರೂಪದಲ್ಲಿ ಜನರು ನೀಡಿದಂತ ಹಣವನ್ನೇ, ಕಾರ್ಯದರ್ಶಿಯೊಬ್ಬ ಸ್ವಂತಕ್ಕೆ ಬಳಸಿಕೊಂಡು, ನಾಪತ್ತೆಯಾಗಿರೋದಾಗಿ ಹೇಳಲಾಗುತ್ತಿದೆ. ಈಗ ಸಹಕಾರ ಸಂಘಕ್ಕೆ ಹಣ ಕಟ್ಟಿದಂತ ಜನರು ತಮ್ಮ ದುಡ್ಡು ವಾಪಾಸ್ಸು ಕೊಡಿಸುವಂತೆ ಒತ್ತಾಯಿಸಿದ್ದಾರೆ.
ಹೌದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಲ್ಲೇ ಬಹುದೊಡ್ಡ ಹಗರಣ ಎನ್ನುವಂತೆ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ. ಕಲ್ಮನೆಯಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದಲ್ಲಿ ಶೇರುದಾರರು, ಪಿಗ್ಮಿ ಕಟ್ಟಿದಂತವರ ಲಕ್ಷಾಂತರ ರೂ ಜನರ ಹಣವನ್ನು ನುಂಗಿ ನೀರು ಕುಡಿಯಲಾಗಿದೆ.
ಹೌದು ಕಲ್ಮನೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದಲ್ಲಿ ಇಂತದ್ದೊಂದು ಹಗರಣ ನಡೆದಿರುವುದಾಗಿ ಜನರು ಅಲವತ್ತುಕೊಂಡಿದ್ದಾರೆ. ಸಹಕಾರ ಸಂಘದ ಕಾರ್ಯದರ್ಶಿ ಮೇಘರಾಜ್ ಎಂಬುವರು ಜನರ ಹಣವನ್ನು ತಮ್ಮ ಸ್ವಂತದ್ದಕ್ಕೆ ಬಳಸಿಕೊಂಡ ಆರೋಪವನ್ನು ಜನರು ಮಾಡುತ್ತಿದ್ದಾರೆ.
ಕೆಲಸಕ್ಕೆ ಬಾರದೇ ರಜೆ ಹಾಕಿ ನಾಪತ್ತೆ
ಸಂಘದ ಕಾರ್ಯದರ್ಶಿ ಸಹಿ ಇಲ್ಲದೇ ಹಣ ಕಟ್ಟಿರೋ ಜನರ ದುಡ್ಡನ್ನು ಸಹಕಾರ ಸಂಘದಿಂದ ತೆಗೆಯೋದಕ್ಕೆ ಸಾಧ್ಯವಿಲ್ಲ. ಹೀಗಾಗಿ ಕಲ್ಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಣವನ್ನು ಬಳಸಿಕೊಂಡಿರುವಂತ ಕಾರ್ಯದರ್ಶಿ ಮಾತ್ರ, ಜನರಿಂದ ದೂರ ದೂರವೇ ಆಗಿದ್ದಾರಂತೆ. ಸಹಕಾರ ಸಂಘಕ್ಕೆ ಬಂದ್ರೂ ಜನರಿಗೆ ಕಾಣದಂತೆ ಹೋಗುತ್ತಿರೋದಾಗಿ ಜನರು ಆರೋಪಿಸಿದ್ದಾರೆ.
ಸಹಕಾರ ಸಂಘಕ್ಕೆ ಬಂದ್ರೆ ಜನರು ದುಡ್ಡು ಬಿಡಿಸಿಕೊಳ್ಳೋದಕ್ಕೆ ಕೇಳಲು ಬರ್ತಾರೆ ಅನ್ನೋದನ್ನು ಅರಿತ ಆಸಾಮಿ ಮೇಘರಾಜ್, ಕೆಲಸಕ್ಕೆ ರಜೆ ಹಾಕಿ ನಾಪತ್ತೆಯಾಗಿದ್ದಾರೆ. ನಮ್ಮ ಹಣವನ್ನು ನಾವು ಬಿಡಿಸಿಕೊಳ್ಳೋದಕ್ಕೆ ಕಾರ್ಯದರ್ಶಿ ಇಲ್ಲದೇ ಸಾಧ್ಯವಾಗುತ್ತಿಲ್ಲ ಅಂತ ಗೋಳಾಡುತ್ತಿದ್ದಾರೆ.
ಇದ್ದೂ ಕುರುಡನಾದ ಸಹಕಾರ ಸಂಘದ ಅಧ್ಯಕ್ಷರು
ಇನ್ನೂ ಕಲ್ಮನೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಏನೋ ನಾಪತ್ತೆಯಾಗಿದ್ದಾರೆ. ಆದರೇ ಸಂಘದ ಅಧ್ಯಕ್ಷರಿದ್ದರೂ, ಕಾರ್ಯದರ್ಶಿಯ ಈ ಹಗರಣ ತಿಳಿದು ಬಂದಿದ್ದರೂ ಕಣ್ಣಿದ್ದೂ ಕುರುಡರಾದಂತೆ ಇದ್ದಾರೆ ಎಂಬುದಾಗಿ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ನಮ್ಮ ಹಣ ವಾಪಾಸ್ ಕೊಡಿ, ಇಲ್ಲವೇ ಸಂಘದ ಮುಂದೆ ಪ್ರತಿಭಟನೆ ಎಚ್ಚರಿಕೆ
ಕಲ್ಮನೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯ ಅವ್ಯವಹಾರಕ್ಕೆ ಜನರು ಬೇಸತ್ತು ಹೋಗಿದ್ದಾರೆ. ಇದುವರೆಗೆ ತಾಳ್ಮೆಯಿಂದಲೇ ಇಂದು, ನಾಳೆ ಬರಬಹುದು ಅನ್ನುವ ನಿರೀಕ್ಷೆಯಲ್ಲಿದ್ದವರಿಗೆ, ಅದು ಭರವಸೆಯಾಗೇ ಉಳಿಯೋ ತರ ತೋರಿ ಬಂದಿದೆ. ಈ ಹಿನ್ನಲೆಯಲ್ಲಿ ನಮ್ಮ ಹಣ ವಾಪಾಸ್ ಕೊಡಿ, ಇಲ್ಲವೇ ಸಂಘದ ಮುಂದೆ ಹಣ ಇಟ್ಟಿರುವಂತ ಎಲ್ಲಾ ಜನರು ಪ್ರತಿಭಟನೆ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.
ಅಲ್ಲ ಸ್ವಾಮಿ ಸ್ಥಳೀಯರು ಕೂಲಿ ನಾಲಿ ಮಾಡಿ, ತಮ್ಮ ಸಂಘಕ್ಕೆ ಮುಂದೊಂದು ದಿನ ಕಷ್ಟ ಕಾಲದಲ್ಲಿ ನೆರವಾಗುತ್ತೆ ಅಂತ ಇಡುಗಂಟು ಇರಿಸಿದ್ದರೇ, ಹೀಗೆನಾ ಮಾಡೋದು? ನಿಮ್ಗೆ ರೈತರು, ಕೂಲಿ ಕಾರ್ಮಿಕರ ಶ್ರಮದ ಹಣಕ್ಕೆ ಬೆಲೆ ಇಲ್ವ ಎಂಬುದು ಕಲ್ಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯ ಜನರ ಪ್ರಶ್ನೆಯಾಗಿದೆ.
ಆದರೇ ಸಾಗರ ತಾಲ್ಲೂಕಲ್ಲಿ ನಡೆದಿರುವಂತ ಕಲ್ಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಈ ದೊಡ್ಡ ಹಗರಣದ ಬಗ್ಗೆ ಈವರೆಗೆ ಯಾವುದೇ ದೂರು, ಪ್ರಕರಣ ದಾಖಲಾಗಿಲ್ಲ.
ವರದಿ: ಉಮೇಶ್ ಮೊಗವೀರ, ಸಾಗರ
ಸಾಗರದಲ್ಲಿ ಶಾಸಕರ ಸೂಚನೆ ಬೆನ್ನಲ್ಲೇ ‘ಕೆಳದಿ PDO ಅಷ್ಪಕ್ ಅಹಮದ್’ ಅಲರ್ಟ್: ರಸ್ತೆಯಲ್ಲಿ ನಿಂತಿದ್ದ ‘ನೀರು ಕ್ಲಿಯರ್’
ರೈತ ಸ್ನೇಹಿ, ತೆರಿಗೆ ಹೊರೆ ರಹಿತ, ಸರ್ವ ಜನಕೇಂದ್ರಿತ, ಸುಭದ್ರ ಬಜೆಟ್: ಆರ್.ಅಶೋಕ್ | Union Budget 2024