ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ದರ್ಶನ್ ಸೇರಿ 17 ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದ ಹಲವು ಕಲಾವಿದರು ನಟ ದರ್ಶನವರನ್ನು ಭೇಟಿಯಾಗಿದ್ದಾರೆ. ಇದೀಗ ದರ್ಶನ್ ಭೇಟಿಗೆ ಹಾಸ್ಯ ನಟ ಹಾಗೂ ಸಂಗೀತ ಸಂಯೋಜಕ ಸಾಧು ಕೋಕಿಲ ಅವರು ಅವಕಾಶ ಸಿಗದೇ ವಾಪಸ್ ಹೋಗಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಾರ ನಟ ದರ್ಶನ್ ಭೇಟಿ ಮಾಡಲು ಇರುವ ಅವಕಾಶಗಳು ಮುಕ್ತಾಯಗೊಂಡಿವೆ. ಈ ಹಿನ್ನೆಲೆಯಲ್ಲಿ ಗುರುವಾರ ದರ್ಶನ್ ಕುಟುಂಬದವರು ಬಂದು ಭೇಟಿ ಮಾಡಲಿದ್ದಾರೆ. ಅವರೊಂದಿಗೆ ನಾನು ಕೂಡ ಬಂದು ದರ್ಶನ್ ಭೇಟಿ ಮಾಡುತ್ತೇನೆ. ಇನ್ನು ಒಬ್ಬೊಬ್ಬರೇ ಬಂದು ನೋಡಿದರೆ ಒಂದು ಭೇಟಿಯ ಸಂಪೂರ್ಣ ಅವಕಾಶವೇ ಮುಗಿದು ಹೋಗಲಿದೆ. ನಾನು ಬೇಟಿ ಆದ್ರೆ ಈ ವಾರದಲ್ಲಿ ಬೇರೆಯವರಿಗೆ ಅವಕಾಶ ಆಗ್ತಿರಲಿಲ್ಲ. ಹಾಗಾಗಿ ಗುರುವಾರ ಬರ್ತೀನಿ ಎಂದು ವಾಪಾಸ್ ತೆರಳಿದರು.
ಈಗಾಗಲೇ ನಟ ದರ್ಶನ್ ಅವರನ್ನು ಭೇಟಿ ಮಾಡಿವುದಕ್ಕೆ ವಾರಕ್ಕೆ ಎರಡೇ ಬಾರಿ ಅವಕಾಶ ನೀಡಲಾಗುತ್ತದೆ. ಅದರಂತೆ ಈಗಾಗಲೇ ಎರಡು ಬಾರಿ ಭೇಟಿ ಮಾಡುವ ಅವಕಾಶ ಮುಕ್ತಾಯಗೊಂಡಿದೆ. ಈಗ ಯಾರೇ ಬಂದರೂ ನಟ ದರ್ಶನ್ ಭೇಟಿ ಮಾಡಲು ಅವಕಾಶವಿಲ್ಲ ಎಂದು ಜೈಲಿನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸ್ಯನಟ ಸಾಧುಕೋಕಿಲ ಅವರು ಜೈಲಿನಿಂದ ವಾಪಸ್ ಮನೆಯೆಡೆಗೆ ವಾಪಸ್ ಹೋಗಿದ್ದಾರೆ. ಇನ್ನು ನಟ ದರ್ಶನ್ಗೆ ಭೇಟಿ ಮಾಡಲು ಗುರುವಾರ ಅವಕಾಶ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.