ಬೆಂಗಳೂರು : ಕನ್ನಡದ ಪ್ರಸಿದ್ಧ ಜಾನಪದ ಗಾಯಕ, ಲಾವಣಿ, ತತ್ವಪದಗಳ ಹರಿಹಾರ ಆಲೂರು ನಾಗಪ್ಪ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಿಮ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಗಿನಜಾವ ಆಲೂರು ನಾಗಪ್ಪ ನಿಧನರಾಗಿದ್ದಾರೆ. ಪ್ರಸಿದ್ದ ನಿರೂಪಕಿ ಕನ್ನಡತಿ ದಿವ್ಯ ಆಲೂರ್ ಅವರ ತಂದೆಯಾದ ನಾಗಪ್ಪನವರ ಅಂತ್ಯ ಕ್ರಿಯೆ ಇಂದು ನಡೆಯಲಿದೆ.
ಸಾವಿರಾರು ಲಾವಣಿ,ತತ್ವಪದಗಳ ಹರಿಕಾರ .. ವಿಶಿಷ್ಟ ಧ್ವನಿಯ ಗಾಯಕ, ನಾಡಿನಾದ್ಯಂತ ಸಹಸ್ರಾರು ಧ್ವನಿ ಮುದ್ರಿಕೆಗಳನ್ನು ಹೊರತಂದಿದ್ದಾರೆ. ಇಂದು ಗವಿಪುರಂ ಗುಟ್ಟಳ್ಳಿಯ ಬನ್ನಿಮಹಾಂಕಾಳಮ್ಮ ದೇವಸ್ಥಾನದ ಹತ್ತಿರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅಳಬ್ಯಾಡ ತಂಗಿ ಅಳಬ್ಯಾಡ, ಕನ್ನಿಕೇರಿ ಹುಡುಗಿಯೊಬ್ಬಳು, ನೀನು ಮದುಕಿಯಂಗೆ ಮುಸುಕಾಕೊಂಡು, ಬೆಂಗಳೂರ್ ಹುಡ್ಗ ಬಂದವನಂತ ಬಗ್ಗಿ ಬಗ್ಗಿ ನೋಡ್ತೀಯಲ್ಲೇ, ಹೆತ್ತ ತಾಯಿ ಋಣವ ತೀರಿಸೋ, ಎಚ್ಚರಾಗು ಕನ್ನಡಿಗ, ತವರಿಂದ ಕಳಿಸಿ ನನ್ನ ಮರಿಬೇಡ ಅಣ್ಣಯ್ಯ, ಇವು ಆಲೂರು ನಾಗಪ್ಪ ಅವರ ಪ್ರಸಿದ್ಧ ಹಾಡುಗಳು.