ರಾಯಚೂರು : ರಾಯಚೂರಿನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಎಂಎಲ್ಸಿ ಸ್ವಾಗತಕ್ಕೆ ಹಾಕಿದ್ದ ಫ್ಲೆಕ್ಸ್ ಬಿದ್ದು ಮೂವರಿಗೆ ಗಂಭೀರವಾದಂತಹ ಗಾಯಗಳಾಗಿರುವ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ.
ಹೌದು ನೂತನ ಎಂಎಲ್ಸಿಗೆ ಬಸನಗೌಡ ಬಾದರ್ಲಿ ಸ್ವಾಗತಕ್ಕೆ ಹಾಕಿದ್ದ ಫ್ಲೇಕ್ಸ್ ಬಿದ್ದು ಮೂವರಿಗೆ ಗಾಯಗಳಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದ್ದು, ಎಂಎಲ್‌ಸಿ ಬಸನಗೌಡ ಬಾದರ್ಲಿ ಸ್ವಾಗತಕ್ಕೆ ಈ ಒಂದು ಫ್ಲೆಕ್ಸ್ ಹಾಕಲಾಗಿತ್ತು. ಸಿಂಧನೂರು ಪಟ್ಟಣದ ಸಿಗ್ನಲ್ ಬಳಿ ಬೃಹತ್ ಫ್ಲೆಕ್ಸ್ ಹಾಕಲಾಗಿತ್ತು.
ಈ ವೇಳೆ ಏಕಾಏಕಿ ಬೃಹತ್ ಫ್ಲೆಕ್ಸ್ ಕುಸಿದು ಬಿದ್ದು ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ವೀರಾಪುರದ ಯಮನಪ್ಪ, ಅಂಬಮ್ಮ, ಚಿಟ್ಟಿಬಾಬುಗೆ ಗಾಯಗಳಾಗಿವೆ. ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಂಧನೂರು ಟೌನ್ ಪೊಲೀಸ್ ಹಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.