ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಜಮೀನಿನ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿಯಾಗಿರುವ ಘಟನೆ ನಡೆದಿದ್ದು, ಘಟನೆಯಲ್ಲಿ ಓರ್ವ ಮಹಿಳೆಗೆ ಗಾಯವಾಗಿರುವ ಘಟನೆ ಚಿಕ್ಕಬಳ್ಳಾಪುರದ ಮೋಟ್ಲುರು ಗ್ರಾಮದಲ್ಲಿ ನಡೆದಿದೆ.
ಪೊಲೀಸರ ಎದುರೇ ಕುಟುಂಬಸ್ಥರು ಹೊಡಿಬಡಿ ನಡೆಸಿದ್ದಾರೆ. ಇದೆ ವೇಳೆ ಕಲ್ಲು ಮಣ್ಣಿನ ಪಾಟ್ ನಿಂದ ಮಹಿಳೆಯ ಮೇಲೆ ದಾಳಿ ನಡೆಸಲಾಗಿದೆ. 1 ಎಕರೆ 9 ಗುಂಟೆ ಜಮೀನಿಗಾಗಿ ಇಂದ್ರಮ್ಮ ಕುಟುಂಬ ಹಾಗೂ ಜಗದೀಶ್ ಕುಟುಂಬಸ್ಥರ ನಡುವೆ ಹೊಡೆದಾಟ ಆರಂಭವಾಗಿದ್ದು, ಜಮೀನಿನಲ್ಲಿ ಜಗದೀಶ್ ಕುಟುಂಬ ಮಹಾಗಣಿ ಸಸಿ ನೆಟ್ಟಿದ್ದರು.
ಇಂದ್ರಮ್ಮ ಅನ್ನೋರ ಹೆಸರಿನಲ್ಲಿರುವ ಆರ್ ಟಿ ಸಿ ದಾಖಲೆ ಇದೆ. ಹೀಗಾಗಿ ಜಗದೀಶ್ ಕುಟುಂಬದವರು ನೆಟ್ಟಿದ್ದ ಮಹಾಗಣಿ ಸಸಿಗಳನ್ನು ಇಂದ್ರಮ್ಮ ಕಿತ್ತುಹಾಕಿದ್ದರು. ಈ ವಿಚಾರಕ್ಕೆ ಇಂದ್ರಮ್ಮ ಹಾಗೂ ಜಗದೀಶ್ ಕುಟುಂಬ ನಡುವೆ ಮಾರಾಮಾರಿ ನಡೆದಿದೆ. ಜಮೀನಿನ ವಿವಾದ ಇನ್ನೂ ಕೋರ್ಟ್ ನಲ್ಲಿದ್ದು ಈಗ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ.