ಶಿವಮೊಗ್ಗ : ಮಳೆಗಾಲದಲ್ಲಿ ಎಷ್ಟೇ ಜಾಗೃತರಾಗಿದ್ದರು ಕೂಡ ಅನಾಹುತಗಳು ಸಂಭವಿಸುತ್ತವೆ. ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ತೆರಳುವ ಜನರಿಗೆ ಎಷ್ಟೇ ಎಚ್ಚರಿಸಿದರು ಕೂಡ ನಿರ್ಲಕ್ಷದಿಂದ ತಮ್ಮ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಾರೆ. ಇದೀಗ ಯುವಕನೊಬ್ಬ ಜೋಗ ಜಲಪಾತ ವೀಕ್ಷಣೆಗೆ ಬಂದಿದ್ದ ಆದರೆ ವೀಕ್ಷಣೆಗೆ ಎಂದು ಬಂದವನು ಕಣ್ಮರೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ.
ಹೌದು ಗದಗ ಮೂಲದ ಆನಂದ್ (24) ಕಣ್ಮರೆಯದ ಯುವಕ ಎಂದು ಹೇಳಲಾಗುತ್ತಿದ್ದು, ಜೂನ್ 15 ರಂದು ಆನಂದ್ ಜೋಗ ಜಲಪಾತ ವೀಕ್ಷಿಸಲು ಬೆಂಗಳೂರಿನಿಂದ ಆಗಮಿಸಿದ್ದನು. ಬೆಂಗಳೂರಲ್ಲಿ ಆನಂದ್ ಟೀ ಪಾಯಿಂಟ್ ಇಟ್ಟುಕೊಂಡಿದ್ದ. ಇದೀಗ ಪೋಲೀಸರು ಆನಂದ್ ಗಾಗಿ ಶೋಧ ನಡೆಸುತ್ತಿದ್ದು, ದಟ್ಟ ಮಂಜು ಇದ್ದ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಘಟನಾ ಸ್ಥಳದಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಸೇರಿದಂತೆ ಸ್ಥಳೀಯರ ಸಹಕಾರದೊಂದಿಗೆ ಯುವಕನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ