ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿರುವಂತ ಶ್ರೀ ಮಹಾಗಣಪತಿ ದೇವಸ್ಥಾನದ ಕೆಲವೆಡೆ ಸೋರುತ್ತಿರುವುದು ಗಮನಕ್ಕೆ ಬಂದಿದೆ. ಅದನ್ನು ಮಳೆ ಕಡಿಮೆಯಾದ ಕೂಡಲೇ ದುರಸ್ಥಿ ಮಾಡಿ ಸರಿ ಮಾಡುವ ಕೆಲಸ ಮಾಡಲಾಗುತ್ತದೆ ಅಂತ ಶ್ರೀ ಮಹಾಗಣಪತಿ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಪ್ರೆಮೀಳಾ ಕುಮಾರಿ ಜಿ.ಕೆ ಹೇಳಿದ್ದಾರೆ.
ಈ ಕುರಿತಂತೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಈ ಹಿಂದೆ ಶ್ರೀ ಮಹಾಗಣಪತಿ ದೇವಾಲಯದ ದುರಸ್ಥಿ ಕಾರ್ಯ ನಡೆಸಲಾಗಿದೆ. ಆದರೂ ಮಳೆ ಬಂದ್ರೆ ಸೋರುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಮಳೆ ಜಾಸ್ತಿ ಇರುವ ಕಾರಣ ದುರಸ್ಥಿಗೆ ತಡೆಯಾಗಿದೆ. ಶೀಘ್ರವೇ ಸರಿ ಮಾಡಲಾಗುತ್ತದೆ ಎಂದಿದ್ದಾರೆ.
ದಾನಿಗಳು ದೇವಸ್ಥಾನದ ದುರಸ್ಥಿ ಸೇರಿದಂತೆ ಅಭಿವೃದ್ಧಿಗೆ ಮುಂದೆ ಬಂದರೇ ಅನುವು ಮಾಡಿಕೊಡಲಾಗುತ್ತದೆ. ಆದರೇ ಈವರೆಗೆ ನಮ್ಮ ಕಚೇರಿಗೆ ಬಂದು ಯಾವುದೇ ದಾನಿಗಳು ಕೇಳಿಲ್ಲ. ಕೇಳಿದರೇ ಇಲಾಖೆಯ ನಿಯಮಗಳ ಅನುಸಾರ ಕ್ರಮವಹಿಸಿ, ಅದಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ನಾನು ಮಾರ್ಚ್.2024ರ ಅಂತ್ಯ ವೇಳೆಗೆ ಶ್ರೀ ಮಹಾಗಣಪತಿ ದೇವಸ್ಥಾನದ ಇಓ ಆಗಿ ಕೆಲಸಕ್ಕೆ ವರದಿ ಮಾಡಿಕೊಂಡಿದ್ದೇನೆ. ಚಾರ್ಜ್ ತೆಗೆದುಕೊಂಡ ಬಳಿಕ ದೇವಸ್ಥಾನ ಸೋರುತ್ತಿರುವ ಬಗ್ಗೆ ಆ ಸಂದರ್ಭದಲ್ಲಿ ಮಾಹಿತಿಯನ್ನು ಯಾರೂ ಗಮನಕ್ಕೆ ತಂದಿರಲಿಲ್ಲ. ಗಮನಕ್ಕೆ ಬಂದ ಕೂಡಲೇ ಕ್ರಮವಹಿಸಲಾಗುತ್ತದೆ ಎಂದರು.
ಶ್ರೀ ಮಹಾಗಣಪತಿ ಜಾತ್ರೆಯ ವೇಳೆಯಲ್ಲಿ 2023-24ರಲ್ಲಿ 7 ಲಕ್ಷ ಹಣ ಸಂಗ್ರವಾಗಿದೆ. ನಾನು ಇಓ ಆಗಿ ಚಾರ್ಚ್ ತೆಗೆದುಕೊಂಡ ಬೆನ್ನಲ್ಲೇ ಬಂದಂತ ಜಾತ್ರೆಯ ವೇಳೆಯಲ್ಲಾದಂತ 2024-25ರಲ್ಲಿ 18.5 ಲಕ್ಷ ಹಣ ಸಂಗ್ರಹವಾಗಿದೆ ಎಂಬ ಅಂಕಿ ಅಂಶ ಸಹಿತ ಮಾಹಿತಿ ಹಂಚಿಕೊಂಡರು.
ಜಾತ್ರೆಯ ಸಂದರ್ಭದಲ್ಲಿ ಪುಟ್ಟ ಮಕ್ಕಳನ್ನು ಬಿಟ್ಟು, ಸಾಗರದಲ್ಲೇ ರೂಂ ಮಾಡಿಕೊಂಡು ಯಾವುದೇ ಕೊರತೆ, ಸಮಸ್ಯೆ ಆಗದಂತೆ ಕ್ರಮವಹಿಸಿದ್ದೇನೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಜಾತ್ರೆ ಮುಗಿಯುವವರೆಗೆ ಭಕ್ತಾಧಿಗಳಿಗೆ ಮೂಲಕ ಸೌಕರ್ಯದ ಎಲ್ಲಾ ವ್ಯವಸ್ಥೆ ಮಾಡುವ ಕೆಲಸ ಮಾಡಿದ್ದೇನೆ ಎಂದರು.
ಮುಜರಾಯಿ ಇಲಾಖೆಯಿಂದ ಶ್ರೀ ಮಹಾಗಣಪತಿ ದೇವಸ್ಥಾನದ ಅಭಿವೃದ್ಧಿಗಾಗಿ 50 ಲಕ್ಷ ಅನುದಾನ ಮಂಜೂರಾಗಿದೆ. ಈ ಬಗ್ಗೆ ಸಾಗರದ ಎಸಿಯವರ ಗಮನಕ್ಕೆ ತಂದು, ಯಾವೆಲ್ಲಾ ಮೂಲ ಸೌಕರ್ಯ ಒದಗಿಸುವ ಕೆಲಸ ಮಾಡಬೇಕು ಎನ್ನುವ ಚರ್ಚೆ ನಡೆಸಲಾಗಿದೆ. ಸೋರುತ್ತಿರುವ ದೇವಸ್ಥಾನದ ಕೆಲ ಭಾಗಗಳಲ್ಲಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಕೆಲಸಕ್ಕೂ ಸೂಚಿಸಿದ್ದಾರೆ ಎಂದರು.
ಶ್ರೀ ಮಹಾಗಣಪತಿ ದೇವಸ್ಥಾನದ ಬಳಿಯಲ್ಲಿ ಮಳಿಗೆಗಳನ್ನು ನಿರ್ಮಿಸಲು ಕ್ರಮವಹಿಸಲಾಗುತ್ತದೆ. ಅರ್ಚಕರಿಗೆ ವಸ್ತ್ರ ಬದಲಿಸಿಕೊಳ್ಳಲು ಕೊಠಡಿ ನಿರ್ಮಿಸಲಾಗುತ್ತದೆ. ಪಾರ್ಕ್, ದೇವಸ್ಥಾನದ ಬಳಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸೋದಕ್ಕೆ ಅನುಕಾಲವಾಗಲು ಸ್ಥಳಾವಕಾಶ ಒದಗಿಸಿಕೊಡುವುದು ಸೇರಿದಂತೆ ಮೂಲಕ ಸೌಕರ್ಯವನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಅಂತ ಸ್ಪಷ್ಟ ಪಡಿಸಿದರು.
ಮಹಾಗಣಪತಿ ಗೋಪುರದಲ್ಲಿ, ಭಾಗಿಲ ಬಳಿ ಸೇರಿದಂತೆ ಕೆಲವೆಡೆ ಮಳೆ ಬಂದಾಗ ನೀರು ಸೋರುತ್ತಿರುವುದು ಕಂಡು ಬಂದಿದೆ. ಕೂಡಲೇ ಲೀಕಿಂಗ್ ಫ್ರೂಪ್ ಸಿಮೆಂಟ್ ನಿಂದ ಸರಿಪಡಿಸುವಂತ ಕೆಲಸ ಮಾಡಲಾಗುವುದು ಎಂದರು.
ಮಳೆ ನಿಂತ ನಂತ್ರ ಸೋರುತ್ತಿರುವ ದೇವಸ್ಥಾನ ಸಂಪೂರ್ಣ ದುರಸ್ಥಿಗೆ ಕ್ರಮ ಕೈಗೊಳ್ಳಲಾಗುತ್ತದೆ. ದೇವಸ್ಥಾನದ ಒಳಗಡೆ ಜಾರುವುದನ್ನು ತಡೆಗಟ್ಟಲು ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗುತ್ತಿದೆ. ಅಲ್ಲದೇ ಸದ್ಯಕ್ಕೆ ಹಳೆಯ ಪ್ಲೋರ್ ಮ್ಯಾಟ್ ಹಾಕಲಾಗಿದೆ. ಹೊಸ ಪ್ಲೋರ್ ಮ್ಯಾಟ್ ಕೂಡ ಹಾಕಿಸಿ, ಜಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾವುದು ಎಂದು ಸಾಗರ ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಮೀಳಾ ಕುಮಾರಿ ಜಿ.ಕೆ ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು