ಬಳ್ಳಾರಿ : ವಾಲ್ಮೀಕಿ ನಿಗಮದಲ್ಲಿ ಅಕ್ರಮಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿ ನಾಗೇಂದ್ರ ಹಾಗೂ ದದ್ದಲ್ ರಕ್ಷಣೆಗೆ ಸಿಎಂ, ಡಿಸಿಎಂ ನಿಂತಿದ್ದಾರೆ. ಬಿ. ನಾಗೇಂದ್ರ ಬಾಯಿ ಬಿಟ್ಟರೆ ಸಿಎಂ ಮತ್ತು ಡಿಸಿಎಂ ಬುಡಕ್ಕೆ ಬರುತ್ತದೆ ಎಂದು ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಅಂತ ಒಪ್ಪಿಕೊಂಡರು. 89 ಕೋಟಿ ಬ್ರಷ್ಟಾಚಾರ ನಡೆದಿದೆ ಅಂತ ಸಿಎಂ ಒಪ್ಪಿಕೊಂಡಿದ್ದಾರೆ. ಆದರೆ ಸರ್ಕಾರಕ್ಕೂ ಹಗರಣಕ್ಕೂ ಸಂಬಂಧ ಇಲ್ಲ ಅಂತ ಹೇಳುತ್ತಾರೆ.ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳೇ ಹಗರಣ ಮಾಡಿದ್ದರೆ ಸಚಿವ ಬಿ ನಾಗೇಂದ್ರ ರಾಜೀನಾಮೆಯನ್ನು ಯಾಕೆ ತೆಗೆದುಕೊಂಡಿದ್ದೀರಿ? ಬಿ ನಾಗೇಂದ್ರ ಹಾಗೂ ದದ್ದಲ್ ರಕ್ಷಣೆಗೆ ಸಿಎಂ, ಡಿಸಿಎಂ ನಿಂತಿದ್ದಾರೆ. ಬಿ. ನಾಗೇಂದ್ರ ಬಾಯಿ ಬಿಟ್ಟರೆ ಸಿಎಂ ಮತ್ತು ಡಿಸಿಎಂ ಬುಡಕ್ಕೆ ಬರುತ್ತದೆ ಎಂದು ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಖಾತೆಯನ್ನು ಹೊಂದಿದ್ದಾರೆ ಹಾಗಾಗಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಳ್ಳಾರಿ ಜಿಲ್ಲೆಯ ಸಂಡೂರು ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದರು.ಮುಡಾ ವಿಚಾರ ಸಂಬಂಧ ರಕ್ಷಣೆಗೆ ನಿಲ್ಲುವಂತೆ ಶಾಸಕರಿಗೆ ಹೇಳುತ್ತಾರೆ ಸದನದಲ್ಲಿ ನನ್ನ ರಕ್ಷಣೆಗೆ ನಿಲ್ಲಬೇಕೆಂದು ಶಾಸಕರಿಗೆ ಸಿಎಂ ಹೇಳುತ್ತಾರೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ದೊಡ್ಡವರ ಹೆಸರು ಕೇಳಿಬರುತ್ತಿದೆ ಎಂದರು.
ವಾಲ್ಮೀಕಿ ನಿಗಮದ ಹಣದಲ್ಲಿ ಐಷಾರಾಮಿ ಕಾರು ಖರೀದಿಸಿದ್ದಾರೆ. ಹಗರಣದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಅದಕ್ಕೆ ಸತ್ಯನಾರಾಯಣ ಮನೆಯಲ್ಲಿ ಹಣ ಸಿಕ್ಕಿದೆ ಅಂತ ಹೇಳುತ್ತಾರೆ. ಸತ್ಯನಾರಾಯಣ ಮನೆಯಲ್ಲಿ 12 ಕೋಟಿ ಹಣ ಸಿಕ್ಕಿದೆ ಅಂತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಬಗ್ಗೆ ನಮಗೆ ಅನುಮಾನವಿದೆ. ಯಾರ ಕಿವಿಗೆ ಸಿಎಂ ಸಿದ್ದರಾಮಯ್ಯನವರು ಹೂವು ಮೂಡಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಸರ್ಕಾರ ಭದ್ರಗೊಳಿಸಲು ಬಿಜೆಪಿಯ ಮೇಲೆ ಸಿಎಂ ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ ನಾನು ಮಾಡಿದರು ಭ್ರಷ್ಟಾಚಾರನೇ ರಾಮಪ್ಪ ಮಾಡಿದ್ರು ಭ್ರಷ್ಟಾಚಾರನೆ. ಸತ್ಯನಾರಾಯಣ ನಿಪುಣ ಇದ್ದಾನೆಂದು ಹಗರಣಕ್ಕೆ ಆಯ್ಕೆ ಮಾಡಿದ್ದಾರೆ. ಚುನಾವಣೆಯಲ್ಲಿ ಹಣಕ್ಕಾಗಿ ಮುಖ್ಯಮಂತ್ರಿಗಳು ಟಾರ್ಗೆಟ್ ನೀಡಿದ್ದರು ಅದಕ್ಕಾಗಿಯೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಯಭೀತರಾಗಿದ್ದಾರೆ. ಅಧಿಕಾರಿಗಳೇ ಹಗರಣ ಮಾಡಿದ್ದಾರೆಂದು ಈಗ ಸಗಣಿ ಸಾರಿಸುವ ಕೆಲಸ ಮಾಡುತ್ತಿದ್ದಾರೆ ಕೆಲವೇ ತಿಂಗಳಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಅಂತದ್ದರಲ್ಲಿ ಎಲ್ಲಿಂದ ಗೃಹಲಕ್ಷ್ಮಿ ಹಣ ಬರುತ್ತೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.
ಸೋಮವಾರ ಬಳಿಕ ಸದನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚಿಸುತ್ತೇವೆ. ನಿಯಮ ಗಾಳಿಗೆ ತೂರಿ ಸಿಎಂ ಕುಟುಂಬದವರು ನಿವೇಶನ ಪಡೆದಿದ್ದಾರೆ ಸಿಎಂ ಸಿದ್ದರಾಮಯ್ಯ ಕುಟುಂಬದವರು ಅಕ್ರಮವಾಗಿ ಸೈಟ್ ಪಡೆದಿದ್ದು ಅಕ್ರಮ ಬೆಳಕಿಗೆ ತಂದ ಆರ್ಟಿಐ ಕಾರ್ಯಕರ್ತರನ್ನು ಜೈಲಿಗೆ ಹಾಕುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಆಡಳಿತ ನೋಡಿ ಆಶ್ಚರ್ಯ ಪಡುವಂತಾಗಿದೆ ಅಷ್ಟು ಹಗರಣ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಸಿಎಂ ಆಗಿರುವುದನ್ನು ಸಹಿಸದೆ ಆರೋಪಿಸುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ರಾಜ್ಯ ಸರ್ಕಾರದ ಹಗರಣಗಳು ಸಿಎಂ ಮುಚ್ಚಿಹಾಕಲು ನಿಂತಿದ್ದಾರೆ. ಎಸ್ಐಟಿ ತನಿಖೆಗೆ ಬಿ ನಾಗೇಂದ್ರ ದದ್ದಲ್ಗೆ ನೋಟಿಸ್ ನೀಡಲಿಲ್ಲ. ಇಡಿ ಅಧಿಕಾರಿ ಎಂಟ್ರಿ ಬಳಿಕ ಸಿಎಂ ಗೆ ಕಾವು ಗೊತ್ತಾಗುತ್ತಿದೆ. ಜಾರಿ ನಿರ್ದೇಶನಾಲಯದ ಬಿಸಿ ಸಿಎಂ ಸಿದ್ದರಾಮಯ್ಯಗೆ ತಟ್ಟುತ್ತಿದೆ ಎಂದರು.