ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಹಲವಾರು ಐತಿಹಾಸಿಕ ಕಟ್ಟಡಗಳನ್ನು ನೋಡಬಹುದು. ಅದರಲ್ಲಿ ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಸಿಕೊಳ್ಳುವ ವಿಧಾನಸೌಧ ಕೂಡ ಒಂದು. ಇದೀಗ ವಿಧಾನಸೌಧದ ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇಂದು ಸ್ಪೀಕರ್ ಯುಟಿ ಖಾದರ್ ಅವರು ಅಧಿಕಾರಿಗಳ ಜೊತೆಗೆ ಆಗಮಿಸಿ ಪರಿಶೀಲನೆ ನಡೆಸಿದರು.
ಹೌದು ವಿಧಾನಸೌಧದ ಪೂರ್ವ ದಿಕ್ಕಿನಲ್ಲಿನ ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿದೆ.ವಿಧಾನಸೌಧದ ಮೊಗಸಾಲೆಯಲ್ಲಿ ಈ ಒಂದು ಗುಮ್ಮಟವಿದ್ದು, ಮಳೆ ನೀರಿನಿಂದ ಬಿರುಕು ಬಿಟ್ಟ ಸ್ಥಳದಿಂದ ಮುಗುಶಾಲೆಯಲ್ಲಿ ನೀರು ಸೋರುತ್ತಿದೆ. ಸ್ಥಳಕ್ಕೆ ಸ್ಪೀಕರ್ ಯುಟಿ ಖಾದರ್ ಅವರು ಆಗಮಿಸಿ ಪರಿಶೀನೇ ನಡೆಸಿದರು.
ಇದೊಂದು ಬಹಳ ಹಿಂದಿನ ವರ್ಷದ ಕಟ್ಟಡ ಕೆಲವೊಂದು ಲೋಪದೋಷಗಳು ಆಗಿರಬಹುದು. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ.ಇದು ಡಿಪಿಆರ್ ಲೋಕೋಪಯೋಗಿ ಇಲಾಖೆ ಅಡಿ ಬರುತ್ತದೆ.ಅವರ ಗಮನಕ್ಕೆ ತಂದು ಸರಿಪಡಿಸಲು ಹೇಳುತ್ತೇನೆ ಎಂದರು.
ಬಹಳ ಹಳೆಯ ಕಾಲದ ಕಟ್ಟಡವಾಗಿರುವುದರಿಂದ ಈ ರೀತಿ ಆಗಿರಬಹುದು. ಒಂದು ಕಡೆ ಸರಿಪಡಿಸುವಾಗ ಇನ್ನೊಂದು ಕಡೆ ಕೆಲವೊಂದು ಲೋಪದೋಷಗಳಾಗಿರುವುದು ಸಹಜ. ಇದರ ಸ್ವಚ್ಛತೆಗೆ ಸಂಬಂಧಪಟ್ಟ ಹಾಗೆ ಇನ್ನಷ್ಟು ಈ ಒಂದು ಕಟ್ಟಡದ ಸಂಸ್ಕೃತಿಯನ್ನು ಉಳಿಸಿ ಇದರ ಸೌಂದರ್ಯೀಕರಣಕ್ಕೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗುತ್ತದೆ ಎಂದು ತಿಳಿಸಿದರು.