ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮಾತನಾಡಿ ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿರುವುದು ನಿಜ. ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಗಿಲ್ಲ ಎಂದು ಹೇಳುತ್ತಿಲ್ಲ. ಅಕ್ರಮ ಆಗಿದೆ ಅಂತಲೇ ನಾವೂ ಹೇಳುತ್ತಿರುವುದು. ಅಕ್ರಮ ಮಾಡಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕ ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ಸಚಿವನಾಗಿದ್ದೇನೆ. ನಾಗೇಂದ್ರ ರಾಜೀನಾಮೆ ಕೊಟ್ಟ ಬಳಿಕ ನಾನೇ ಇಟ್ಟುಕೊಂಡಿದ್ದೇನೆ. ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಗಿಲ್ಲ ಎಂದು ಹೇಳುತ್ತಿಲ್ಲ. ಅಕ್ರಮ ಆಗಿದೆ ಅಂತಲೇ ನಾವೂ ಹೇಳುತ್ತಿರುವುದು. ಅಕ್ರಮ ಮಾಡಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು.ಆದ್ರೆ, ಇದು ಸರ್ಕಾರಕ್ಕೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಬಸನಗೌಡ ದದ್ದಲ್ ನ ವಾಲ್ಮೀಕಿ ನಿಗಮದ ಅಧ್ಯಕ್ಷನಾಗಿ ಮಾಡಿದ್ದೇವೆ. ನಾಗೇಂದ್ರ ಇಲಾಖೆ ಮಂತ್ರಿಯಾಗಿದ್ದರು. ಯೂನಿಯನ್ ಬ್ಯಾಂಕ್ ನಲ್ಲಿ ಶೋಭನಾ ಎನ್ನುವರು ಎಂಡಿ ಇದ್ದಾರೆ. ಅದೇ ಬ್ಯಾಂಕ್ ಎಂಜಿ ರಸ್ತೆಯಲ್ಲಿದೆ. ಯೂನಿಯನ್ ಬ್ಯಾಂಕ್ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತೆ. ವಸಂತನಗರದ ಬ್ಯಾಂಕ್ ನಿಂದ ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಗೆ ವರ್ಗಾವಣೆ ಮಾಡಿದ್ದಾರೆ.
ಯೂನಿಯನ್ ಬ್ಯಾಂಕ್ ಡೆಪ್ಯುಟಿ ಮ್ಯಾನೇಜರ್ ಮಹೇಶ.ಜೆ ಅವರು ಜೂನ್ 3ರಂದು ದೀಪಾ, ಸುಚಿಶ್ಮಿತಾ ರಾವ್, ಚೀಫ್ ಮ್ಯಾನೇಜರ್, ಕೃಷ್ಣಮೂರ್ತಿ ಸೇರಿ ಹಲವರ ವಿರುದ್ದ ದೂರು ನೀಡಿದ್ದಾರೆ. ಅದರ ಮೇಲೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಗಿರೀಶ್ ಚಂದ್ರ ಜೋಶಿ, ಜೂನ್ 3ರಂದು ಎಂಜಿ ರಸ್ತೆಯ ಅದೇ ಅಧಿಕಾರಿಗಳ ವಿರುದ್ಧ ಸೆಕ್ಷನ್ 17A ಕ್ರಿಮಿನಲ್ ಕೇಸ್ ಬಗ್ಗೆ ಪತ್ರ ಬರೆದಿದ್ದಾರೆ.
ದೀಪಾ ಮತ್ತು ಸುಚಿಶ್ಮಿತಾ ಮೇಲೆ ಅದೇ ರೀತಿ ಇರುತ್ತೆ. ನೀಡ್ ಟೂ ಎಕ್ಸಾಮಿನ್ ಅಂತ ದೂರಿನಲ್ಲಿ ಬರೆದಿರುತ್ತಾರೆ. ಈ ಹಗರಣದಲ್ಲಿ ಎಸ್ ಐಟಿ, ಸಿಬಿಐ ವಿಚಾರಣೆ ನಡೆಸುತ್ತಿದ್ದಾರೆ. ಸೊಮೊಟೊ ವಿಚಾರಣೆಯನ್ನ ಇಡಿ ನಡೆಸುತ್ತಿದೆ. ಇಡಿ ಈಗಾಗಲೇ ದದ್ದಲ್, ನಾಗೇಂದ್ರ ಮನೆ ರೇಡ್ ಮಾಡಿದ್ದಾರೆ. ನಂತರ ವಿಚಾರಣೆಗೆ ಕರೆದು ನಾಗೇಂದ್ರರನ್ನ ಅರೆಸ್ಟ್ ಮಾಡಿದ್ದಾರೆ. ದದ್ದಲ್ನ ಸಹ ವಿಚಾರಣೆ ನಡೆಸಿದ್ದಾರೆ ಎಂದು ತಿಳಿಸಿದರು.