ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಜೈಲಿನಲ್ಲಿ ನನಗೆ ಊಟ ಸರಿಹೊಂದುತ್ತಿಲ್ಲ. ಹಾಗಾಗಿ ಮನೆಯಿಂದ ಊಟ, ಬಟ್ಟೆ ಪುಸ್ತಕ ಸೇರಿದಂತೆ ಇತರೆ ವಸ್ತುಗಳು ಬೇಕು ಎಂದು ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಪೀಠವು ಜುಲೈ 29ಕ್ಕೆ ವಿಚಾರಣೆ ಮುಂದೂಡಿತು.
ದರ್ಶನ್ ಸಲ್ಲಿಸಿರುವ ರಿಟ್ ಅರ್ಜಿಯ ಕುರಿತು ಇಂದು ಹೈಕೋರ್ಟ್ ನಲ್ಲಿ ಎಸ್ ಆರ್ ಕೃಷ್ಣಕುಮಾರ್ ಅವರಿಂದ ವಿಚಾರಣೆ ನಡೆಯಿತು. ಜೈಲಿನಲ್ಲಿ 5 ಸಾವಿರ ಖೈದಿಗಳು ದಿನವೂ ಅಲ್ಲಿ ಊಟ ಮಾಡುತ್ತಿದ್ದಾರೆ.ಯಾರಿಗೂ ಫುಡ್ ಪಾಯಿಸನ್ ಆಗಿಲ್ಲ. ದರ್ಶನ್ ಕೂಡ ಫುಡ್ ಪಾಯಿಸನ್ ಬಗ್ಗೆ ವೈದ್ಯರಿಗೆ ಹೇಳಿಲ್ಲ ಎಂದು ಸರ್ಕಾರದ ಪರ ಎಎಪಿ ಭಾನುಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದರು.
ವಿಚಾರಣೆಯ ಬಳಿಕ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯ ಪೀಠವು ದರ್ಶನ್ ಅವರು ಸಲ್ಲಿಸಿದ್ದ ರಿಟ್ ಅರ್ಜಿ ಕುರಿತಂತೆ 29ಕ್ಕೆ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ. ಜೈಲಿನ ಊಟದಿಂದ ದರ್ಶನವರು ದಿನದಿಂದ ದಿನಕ್ಕೆ ತೂಕ ಕಳೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಕೂಡ ತಿಳಿಸಿದರು.