ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಭೇಟಿ ಮಾಡಲು ಇಂದು ನಿರ್ದೇಶಕ ತರುಣ್ ಸುಧೀರ್ ಜೈಲಿಗೆ ಆಗಮಿಸಿದ್ದರು. ಈ ವೇಳೆ ನಟ ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು ನನ್ನ ಮದುವೆ ವಿಷಯ ದರ್ಶನ್ ಅವರಿಗೆ ಮೊದಲೇ ಗೊತ್ತಿತ್ತು. ಹಾಗಾಗಿ ನನ್ನ ಮದುವೆ ಅಸ್ಟೊತ್ತಿಗೆ ದರ್ಶನ್ ಜೈಲಿನಿಂದ ರಿಲೀಸ್ ಆಗುತ್ತಾರೆ ಎಂದು ತಿಳಿಸಿದರು.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲುಪಾಲಗಿದ್ದು, ಇಂದು ನಟ ದರ್ಶನ್ ಭೇಟಿಗೆ ನಿರ್ದೇಶಕ ತರುಣ ಸುಧೀರ್ ಪರಪ್ಪನ ಆಗ್ರಹಾರ ಜೈಲಿಗೆ ಆಗಮಿಸಿದ್ದಾರು. ನಟ ದರ್ಶನ್ ಭೇಟಿ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ್ದು, ಜೈಲಿನ ವಾತಾವರಣದಿಂದ ಸಂಜೆಯ ವೇಳೆ ದರ್ಶನ್ ಗೆ ಜ್ವರ ಕಾಣಿಸಿಕೊಳ್ಳುತ್ತಿತ್ತು. ನಟ ದರ್ಶನ್ ಈಗ ಗುಣಮುಖರಾಗುತ್ತಿದ್ದಾರೆ ಎಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿರ್ದೇಶಕ ತರುಣ ಸುಧೀರ್ ಹೇಳಿದರು.
ಏನಿಲ್ಲ ಮಗನೇ ಆರಾಮವಾಗಿದ್ದೇನೆ. ಸ್ವಲ್ಪ ಜ್ವರ ಇತ್ತು ಅಷ್ಟೇ ಎಂದರು. ನನ್ನ ಮದುವೆ ವಿಚಾರ ನಟ ದರ್ಶನ್ ಗೆ ಮೊದಲೇ ಗೊತ್ತಿದೆ. ಆದರೂ ನಟ ದರ್ಶನ್ ಇಲ್ಲದೆ ಮದುವೆ ಆಗುವ ಬಗ್ಗೆ ಕೊರಗು ಇತ್ತು. ನಿಗದಿತ ದಿನಾಂಕದಂದು ಮದುವೆ ಆಗೋ ಅಷ್ಟೊತ್ತಿಗೆ ಬರ್ತೀನಿ ಅಂದರು. ನಟ ದರ್ಶನ್ ಏನು ತಪ್ಪು ಮಾಡಿಲ್ಲ ಎಂಬ ನಂಬಿಕೆಯಲ್ಲಿ ಇದ್ದೇವೆ ಎಂದರು.
ಹಾಗೆ ಆಗಲಿ ಅಂತ ದೇವರಲ್ಲಿ ಬೇಡಿಕೊಳ್ಳುವೆ. ಸ್ಪೆಷಲ್ ರಿಕ್ವೆಸ್ಟ್ ಮೇಲೆ ಮದುವೆಗೆ ದರ್ಶನ್ ಬರ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇಲ್ಲ ಅಷ್ಟೋತ್ತಿಗೆ ನಟ ದರ್ಶನ್ ಜೈಲಿನಿಂದ ರಿಲೀಸ್ ಆಗುತ್ತಾರೆ. ಆಹ್ವಾನ ಪತ್ರಿಕೆ ನೀಡಲು ಅವಕಾಶವಿಲ್ಲ. ಆದರೆ ಆಶೀರ್ವಾದ ಪಡೆದುಕೊಂಡೆ. ಜೈಲಿನಲ್ಲಿ ನಟ ದರ್ಶನ್ ಸ್ವಲ್ಪ ತೂಕ ಕಳೆದುಕೊಂಡು ಸಣ್ಣಗಾಗಿದ್ದಾರೆ ಎಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿರ್ದೇಶಕ ತರುಣ ಸುಧೀರ್ ತಿಳಿಸಿದರು