ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆಯಿಂದ 5 ವರ್ಷದ ಬಾಲಕಿ ಸೇರಿದಂತೆ ಲಾರಿ ಚಾಲಕ ಹಾಗೂ ಟ್ಯಾಂಕರ್ ಚಾಲಕನ ಮೃತ ದೇಹಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಹೌದು ಗುಡ್ಡ ಕುಸಿತ ಪ್ರಕರಣದಲ್ಲಿ ಇಂದು ಗ್ಯಾಸ್ ಟ್ಯಾಂಕರ್ ಚಾಲಕ ಮುರುಗನ್ (45) ಹಾಗೂ ಲಾರಿ ಚಾಲಕ ಚಿನ್ನ (55) ಶವ ಪತ್ತೆಯಾಗಿದ್ದು, ಅದಕ್ಕೂ ಮೊದಲು 5 ವರ್ಷದ ಬಾಲಕಿ ಅವಂತಿಕಾ ಶವ ಕೂಡ ಪತ್ತೆಯಾಗಿತ್ತು. ಅಂಕೋಲ ತಾಲೂಕಿನ ಮಂಜಗೋಣಿ ಬಳಿ ಈ ಇಬ್ಬರ ಚಾಲಕರ ಶವ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಯಾಗಿರುವ ಶವಗಳು 7ಕ್ಕೆ ಏರಿಕೆಯಾಗಿವೆ.