ಹುಬ್ಬಳ್ಳಿ : ಮುಡಾ ಅಕ್ರಮ ಹಗರಣ ಪ್ರಕರಣ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ ಎಸ್ಟಿ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ, ಬಿಜೆಪಿಯ ಸಂಸದ ಗೋವಿಂದ ಕಾರಜೋಳ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು,ಸಿಎಂ ಸಿದ್ದರಾಮಯ್ಯ ಓಟ್ ಬ್ಯಾಂಕಿಗೆ ದಲಿತರ ಹಣ ಬಳಕೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಿಂದ ಹೆಸರು ಉಪಯೋಗ ಮಾಡಿಕೊಂಡು ಮೇಲೆರಿದ್ದಾರೆ. ಇದು ಸರ್ಕಾರದ ಖಜಾನೆಯ ಹಗಲು ದರೋಡೆ. ಬಿ ನಾಗೇಂದ್ರ ರಾಜಿನಾಮೆಯಿಂದ ನನಗೆ ಸಮಾಧಾನ ಆಗಿಲ್ಲ.ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆಗೆ ಒಳಗಾಗಬೇಕು ಎಂದು ಆಗ್ರಹಿಸಿದರು.
ಮುಡಾ ನಿವೇಶನ ಯಾರು ಕೊಟ್ಟಿದ್ದಾರೆ ಎಂಬುದು ಮುಖ್ಯವಲ್ಲ. ಅಧಿಕಾರದ ದುರುಪಯೋಗದ ಪ್ರಶ್ನೆ ಇದು ಎಂದ ಕಾರಜೋಳ ಸ್ವಾತಂತ್ರ್ಯ ಬಂದ ಮೇಲೆ ನೂರಾರು ಆಯೋಗ ರಚನೆ ಆಗಿವೆ.ಅದರ ದಾಖಲೆಗಳೆಲ್ಲ ರೆಕಾರ್ಡ್ ರೂಂನಲ್ಲಿವೆ. ಯಾವ ಕಾಲದಲ್ಲಿ ಹಗರಣ ಆಗಿದೆ ಅದೆಲ್ಲವೂ ತನಿಖೆ ಆಗಲಿ ಎಂದು ಹುಬ್ಬಳ್ಳಿಯಲ್ಲಿ ಬಿಜೆ