ಕೊಡಗು : ಲಾರಿ ಹಾಗೂ ದ್ವಿಚಕ್ರ ವಾಹನದ ಮಧ್ಯ ಭೀಕರವಾಗಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೌದು ಲಾರಿ ಬೈಕ್ ಮಧ್ಯ ಅಪಘಾತ ನಡೆದಿದ್ದು, ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೊಡಗರಹಳ್ಳಿಯಲ್ಲಿ ಈ ಒಂದು ಅಪಘಾತ ನಡೆದಿದೆ. ದ್ವಿಚಕ್ರ ವಾಹನದಲ್ಲಿದ್ದ ರಕ್ಷಿತ್ (27) ಮಂಜು (26) ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಲ್ಲಿ ನಿಲ್ಲದ ‘ವೀಲಿಂಗ್’ ಪುಂಡರ ಹಾವಳಿ
ಬೆಂಗಳೂರಲ್ಲಿ ನೆಲಮಂಗಲ ಹೆದ್ದಾರಿಯಲ್ಲಿ ಪುಂಡರ ವೀಲಿಂಗ್ ಹಾವಳಿ ಮುಂದುವರೆದಿದ್ದು, ಹೆದ್ದಾರಿಯಲಿ ವಾಹನಗಳನ್ನು ಪುಂಡರು ಅಡ್ಡಗಟ್ಟಿದ್ದಾರೆ. ಸವಾರರಿಗೆ ಪುಂಡರು ವೀಲಿಂಗ್ ಮಾಡುವ ಮೂಲಕ ಆತಂಕ ಸೃಷ್ಟಿ ಮಾಡುತ್ತಿದ್ದಾರೆ.ಪುಂಡರ ವೀಲಿಂಗೆ ಪೊಲೀಸರು ಬ್ರೇಕ್ ಹಾಕದೆ ಇರುವುದರಿಂದ ಪುಂಡರು ಬಾಲ ಬಿಚ್ಚುತ್ತಿದ್ದಾರೆ.