ಮಂಗಳೂರು : ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ KSRTC ಬಸ್ನಲ್ಲಿ ಅಪ್ರಾಪ್ತ ಬಾಲಕಿಗೆ ಮೌಲ್ವಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಪ್ರಯಾಣಿಕರು ಆತನಿಗೆ ಬಸ್ಸಿನಲ್ಲೇ ಅಮಾನವೀಯವಾಗಿ ಥಳಿಸಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹೌದು ಕೆಎಸ್ಆರ್ಟಿಸಿ ಬಸ್ನಲ್ಲಿ ಮುಂದಿನ ಸೀಟಿನಲ್ಲಿ ಕುಳಿತ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆಂದು ಮುಸ್ಲಿಂ ಮೌಲ್ವಿಗೆ ಪ್ರಯಾಣಿಕರು ಗುಂಪಾಗಿ ಥಳಿಸಿದ ಘಟನೆ ನಡೆದಿದೆ. ಈ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ X ನಲ್ಲಿ ಸನಾತನ ಎಂಬ ಬಳಕೆದಾರರು ಮೌಲ್ವಿಗೆ ಪ್ರಯಾಣಿಕರು ಥಳಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ಸಿಗೆ ಹಾಸನದಿಂದ ಹತ್ತಿದ್ದ ಮುಸ್ಲಿಂ ವ್ಯಕ್ತಿಯ, ಮುಂದಿನ ಸೀಟಿನಲ್ಲಿ ಅಮ್ಮ ಹಾಗೂ ಇಬ್ಬರು ಮಕ್ಕಳು ಕುಳಿತಿದ್ದರು. ಬಸ್ ಹೋಗುತ್ತಿರುವಾಗ ಮುಂಬದಿ ಸೀಟಿನಲ್ಲಿ ಕುಳಿತಿದ್ದ ಅಪ್ರಾಪ್ತ ಬಾಲಕಿಗೆ ಸೀಟಿನ ಕೆಳಭಾಗದಿಂದ ಕೈ ಹಾಕಿ ಕಿರುಕುಳ ನೀಡಿದ್ದಾನೆ. ಇದರಿಂದ ಮೂರ್ನಾಲ್ಕು ಬಾರಿ ಅಸಹಜವಾಗಿ ಆಗಿರಬಹುದು ಎಂದು ಸುಮ್ಮನಿದ್ದಾಳೆ.
ಅಷ್ಟಕ್ಕೂ ಸುಮ್ಮನಾಗದ ಈ ವ್ಯಕ್ತಿ ಪುನಃ ಸೀಟಿನ ಸಂದಿಯಲ್ಲಿ ಕೈ ತೂರಿಸಿ ಕಿರುಕುಳ ನೀಡಿದ್ದಾನೆ. ಇದನ್ನು ಸಹೊಸದ ಬಾಲಕಿಯ ತಾಯಿ ಬಂದು ಬೈದು ನೀನ್ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಾಳೆ. ಆಗ ನನ್ನಿಂದ ತಪ್ಪಾಯ್ತು, ಇನ್ಮೇಲೆ ಹೀಗೆ ಮಾಡೊಲ್ಲ ಎಂದು ಹೇಳಿ ಕೈಮುಗಿದು ಬೇಡಿಕೊಂಡಿದ್ದಾನೆ. ಆಗ ಮುಸ್ಲಿಂ ವ್ಯಕ್ತಿ ಯಾವಾಗ ತಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡನೋ ಆಗ ಅಕ್ಕಪಕ್ಕದಲ್ಲಿದ್ದವರೆಲ್ಲಾ ಎದ್ದು ಬಂದು ಪ್ರಶ್ನೆ ಮಾಡಿ ಹಲ್ಲೆ ಮಾಡಲು ಮುಂದಾಗಿದ್ದಾರೆ.
ಮಂಗಳೂರು ಬಸ್ಸಿನಲ್ಲಿ ಅಪ್ರಾಪ್ತ ಹಿಂದೂ ಬಾಲಕಿಗೆ ಕಿರುಕುಳ ನೀಡಿದ ಮುಸ್ಲಿಂ ಮೌಲ್ವಿಯನ್ನು ಹಿಂದೂ ಮಹಿಳೆಯರು ಥಳಿಸಿದ್ದಾರೆ.
ಪೂರ್ತಿ ವಿಡಿಯೋ.
ಇದನ್ನು ಕೂಡ ಸಮರ್ಥನೆ ಮಾಡಿಕೊಳ್ಳುವ ಜನ ಇದ್ದಾರೆ.#Mangalore #Muslim pic.twitter.com/wNGVPRCwcA
— ಸನಾತನ (@sanatan_kannada) July 14, 2024