ಬೆಂಗಳೂರು : HD ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಇದೀಗ ಗಿನ್ನಿಸ್ ದಾಖಲೆಗೆ ಸಾಗಾವುಷ್ಟು ಸುಳ್ಳು ಹೇಳಿದ್ದಾರೆ. ಮಂತ್ರಿಸ್ಥಾನಕ್ಕೆ ಗೌರವ ಕೊಟ್ಟು 10% ಸುಳ್ಳು ಹೇಳುವುದು ಕಡಿಮೆ ಮಾಡಿ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷಣ HD ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಮುಡಾ ಹಗರಣದ ಆರೋಪ ಮಾಡಿ ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನೀಲ ನಕ್ಷೆ ತೋರಿಸಿದರು. ನನ್ನ ಬಳಿಯೂ ನೀಲ ನಕ್ಷೆಯಿದೆ. ಕುಮಾರಸ್ವಾಮಿ ಅವರು ನನಗೆ 10 ನಿಮಿಷ ಟೈಮ್ ಕೊಡಲಿ. ದಾಖಲೆ ಹಿಡಿದು, ಮಾಧ್ಯಮಗಳ ಜೊತೆಗೆ ಬರುತ್ತೇನೆ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ಗೆ ಟ್ಯೂಷನ್ ಕೊಟ್ಟ ಮೇಷ್ಟ್ರು ಸರಿಯಲ್ಲ. ವ್ಯಕ್ತಿಗಳ ಹೆಸರಲ್ಲಿ ಡಿನೋಟಿಫೀಕೇಷನ್ ಆಗಲ್ಲ, ಸರ್ವೆ ನಂಬರ್ ಆಧರಿಸಿ ನೋಟಿಫಿಕೇಷನ್ ಡಿನೋಟಿಫಿಕೇಷನ್ ಆಗುತ್ತದೆ. ಯಾರೋ ಟೈಪ್ ಮಾಡಿದ್ದನ್ನು ತಂದು ಬಿಡುಗಡೆ ಮಾಡಬೇಡಿ ಸ್ವಾಮೀ ಸಿಎಂ ಪತ್ನಿ ಪಾರ್ವತಿಯ ಅವರ ಬಗ್ಗೆ ದಾಖಲೆ ಇಟ್ಟು ಆರೋಪ ಮಾಡಲಿ. ಸುಮ್ಮನೆ ನೀವೇ ಸುಳ್ಳು ಸೃಷ್ಟಿ ಮಾಡಿಕೊಳ್ಳುತ್ತೀದ್ದೀರಾ? ಎಂದು ವಾಗ್ದಾಳಿ ನಡೆಸಿದರು.
2005 ರಲ್ಲಿ ಜಮೀನು ಕನ್ವರ್ಷನ್ ಆಗುತ್ತದೆ. ಮುಡಾ ವಿರುದ್ದ ಕ್ರಿಮಿನಲ್ ಕೇಸ್ ಹಾಕಬೇಕಿತ್ತು. ಮುಡಾ ಜಮೀನು ವಿಚಾರದಲ್ಲಿ ತಪ್ಪು ಮಾಡಿದೆ. ಮುಡಾ ನಡವಳಿಯಲ್ಲೇ ತಪ್ಪಾಗಿದೆ ಎಂಬುದು ಗೊತ್ತಾಗುತ್ತದೆ. ಮುಡಾ ಸ್ಕ್ಯಾಮ್ ಅಲ್ಲ, ಇದು ಸ್ಕ್ಯಾಮ್ ಅಂತ ದಯವಿಟ್ಟು ಹೇಳಬೇಡಿ.ಜಮೀನು ಪಾರ್ವತಿ ಸಿದ್ದರಾಮಯ್ಯ ಗೆ ಬಂದಿದ್ದೇ 2010 ರ ಬಳಿಕ. ಈ 3.16 ಎಕರೆ ಡೀನೋಟಿಫೈ ಆಗಿದ್ದು 1998 ರಲ್ಲಿ ಆಗ ಜಮೀನಿನ ಮಾಲಿಕತ್ವ ಇದ್ದಿದ್ದು ನಿಂಗ ಹೆಸರಲ್ಲಿ ಎಂದು ವಿವರಿಸಿದರು.