ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ತಾಯಿಯೊಬ್ಬಳು ತನ್ನ ಮಗನನ್ನು ಕೊಂದು ನಂತರ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಲಹಂಕದ RNZ ಅಪಾರ್ಟ್ಮೆಂಟಲ್ಲಿ ನಡೆದಿದೆ.
ಹೌದು ಬೆಂಗಳೂರಿನ ಯಲಂಕದ RNZ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ನೇಣು ಬಿಗಿದು ವರ್ಷದ ಪುತ್ರ ಭಾರ್ಗವ್ (13) ಕೊಲೆ ಮಾಡಿದ್ದೂ, ಬಳಿಕ ತಾಯಿ ರಮ್ಯಾ (40) ತಾನು ಕೂಡ ನೇಣಿಗೆ ಶರಣಾಗಿದ್ದಾಳೆ. ಮೂರು ತಿಂಗಳ ಹಿಂದೆ ಪತಿ ಶ್ರೀಧರ್ ಕ್ಯಾನ್ಸರಿಂದ ಸಾವನಪ್ಪಿದ್ದರು. ಇದರಿಂದ ರಮ್ಯಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಜೂನ್ 19ರಂದು ಪಿಜಿಯಲ್ಲಿದ್ದ ಮಗಳ ಜೊತೆ ಮಾತನಾಡಿದರು. ಮಗಳ ಜೊತೆ ಮಾತನಾಡಿ ನೇಣಿಗೆ ಶರಣಾಗಿರುವ ರಮ್ಯಾ ಪೊಲೀಸರು, ವೈದ್ಯರು ಹಾಗೂ ಮಗಳಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.