ಬೆಂಗಳೂರು: ಕರ್ನಾಟಕ ಹೈಕೋರ್ಟ್ ನಿಂದ ಕನ್ನಡದ ಪವರ್ ಟಿವಿ ಪ್ರಸಾರ ಸ್ಥಗಿತಕ್ಕೆ ಆದೇಶಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಪವರ್ ಟಿವಿ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್ ನಿಂದ ಹೈಕೋರ್ಟ್ ನೀಡಿದ್ದಂತ ಪ್ರಸಾರ ಸ್ಥಗಿತದ ಆದೇಶಕ್ಕೆ ತಡೆ ನೀಡಿ, ಬಿಗ್ ರಿಲೀಫ್ ನೀಡಿದೆ.
ಈ ಹಿಂದೆ ಪವರ್ ಟೀವಿ ಮೇಲೆ ಹೈಕೋರ್ಟ್ ಚಾಟಿ ಬೀಸಿತ್ತು. ಲೈಸೆನ್ಸ್ ರಿನಿವಲ್ ಮಾಡದ ಗಂಭೀರ ಆರೋಪದ ಹಿನ್ನಲೆಯಲ್ಲಿ ಪವರ್ ಟಿ ವಿ ಕಾರ್ಯ ಪ್ರಸಾರ ಚಟುವಟಿಕೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ ಮಾಡಿತ್ತು.
ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯಿದೆ ಉಲ್ಲಂಘನೆ ಮಾಡಲಾಗಿದೆ. ತಕ್ಷಣದಿಂದಲೇ ಚಾನೆಲ್‌ನಲ್ಲಿ ಸುದ್ದಿಗಳು ಸೇರಿ ಯಾವುದೇ ಪ್ರಸಾರ ಮಾಡಬಾರದು ಅಂತ ಹೈಕೋರ್ಟ್ ನ್ಯಾಯಮೂರ್ತಿ. ಎಸ್ ಆರ್ ಕೃಷ್ಣಕುಮಾರ್ ರ ಏಕಸದಸ್ಯ ಪೀಠ ಆದೇಶ ಮಾಡಿದ್ದರು.
ಜೆಡಿಎಸ್ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ ಎಂ ರಮೇಶ್ ಗೌಡರ ಪತ್ನಿ ಡಾ.ಎ ರಮ್ಯಾ ರಮೇಶ್ & ಹಿರಿಯ ಐಪಿಎಸ್ ಅಧಿಕಾರಿ ಬಿ ಆರ್ ರವಿಕಾಂತೇಗೌಡ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಸಿದ್ದರು. ಅರ್ಜಿದಾರರ ಪರ ಪ್ರಭುಲಿಂಗ ನಾವದಗಿ, ಸಂದೇಶ್ ಚೌಟ ವಾದಿಸಿದ್ದರು.
ರಾಕೇಶ್ ಶೆಟ್ಟಿ, ಅರ್ಜಿದಾರರ ವಿರುದ್ಧ ಮಾನಹಾನಿಕರ ಸುದ್ದಿ ಬಿತ್ತರಿಸುತ್ತಿದ್ದಾರೆ. ಸದ್ಯ ರಾಕೇಶ್ ಶೆಟ್ಟಿ ಚಾನೆಲ್‌ನ್ನು ಕಾನೂನುಬಾಹಿರವಾಗಿ ನಡೆಸುತ್ತಿದ್ದಾರೆ. 2021ರಿಂದಲೂ ಚಾನೆಲ್‌ನ ಪರವಾನಗಿ ನವೀಕರಿಸಿಲ್ಲ. ಈ ಬಗ್ಗೆ ವಿಸ್ತೃತವಾಗಿ ಪೀಠದ ಮುಂದೆ ವಾದ ಮಂಡನೆ ಮಾಡಲಾಗಿತ್ತು.
ಸುದೀರ್ಘ ವಾದ ಆಲಿಸಿದ ಹೈಕೋರ್ಟ್ ನ್ಯಾಯಪೀಠವು, ರಾಕೇಶ್ ಶೆಟ್ಟಿ, ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಇದಕ್ಕೆ ತಕ್ಷಣದಿಂದಲೇ ಸುದ್ದಿ ಸೇರಿ ಯಾವುದೇ ಪ್ರಸಾರ ಮಾಡಬಾರದು ಅಂತ ಆದೇಶಿಸಿತ್ತು. ಆ ಬಳಿಕ ಪ್ರಸಾರ ಸ್ಥಗಿತದ ಆದೇಶವನ್ನು ಮತ್ತೆ ಹೈಕೋರ್ಟ್ ವಿಸ್ತರಿಸಿತ್ತು.
ಈ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪವರ್ ಟಿವಿಯ ಮೆಸರ್ಸ್ ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಹೈಕೋರ್ಟ್ ಗೆ ಸ್ಥಗಿತದ ಆದೇಶ ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿತ್ತು.
ಸೂಕ್ತ ಪರವಾನಗಿ ಇಲ್ಲ ಎಂಬ ಕಾರಣಕ್ಕಾಗಿ ಪವರ್ ಟಿವಿ ಪ್ರಸಾರವನ್ನು ನಿಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಪ್ರಸಾರ ತಡೆ ಆದೇಶಕ್ಕೆ ತಡೆ ನೀಡಿದೆ.
ಪವರ್ ಟಿವಿ ಪ್ರಸಾರ ನಿಲ್ಲಿಸಿರುವುದು ಮಾಧ್ಯಮದ ಹಕ್ಕು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಶುಕ್ರವಾರ ನೀಡಿದ ಆದೇಶದಲ್ಲಿ ತಿಳಿಸಿದೆ.
ಈ ಬೆಳವಣಿಗೆ ಗಮನಿಸಿದರೆ ಮಾಧ್ಯಮದ ಹಕ್ಕು ಕಸಿಯುವ ರಾಜಕೀಯ ವೇದಾಂತ ಅಡಗಿರುವುದು ಸ್ಪಷ್ಟವಾಗಿದೆ. ಸರ್ಕಾರ ಮಾಧ್ಯಮದ ಹಕ್ಕು ರಕ್ಷಣೆಗೆ ಮುಂದಾಗಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಈ ಮೂಲಕ ಪವರ್ ಟಿವಿಗೆ ಬಿಗ್ ರಿಲೀಫ್ ನೀಡಿದಂತೆ ಆಗಿದೆ.
‘ಇ-ಆಫೀಸ’ನ್ನು ಅನುಷ್ಠಾನಗೊಳಿಸದ ಅಧಿಕಾರಿಗಳಿಗೆ ಬಿಗ್ ಶಾಕ್: ‘ಕಂದಾಯ ಇಲಾಖೆ’ಯಿಂದ ನೋಟಿಸ್
BREAKING: ‘ಅಗಲಿದ ಅಪರ್ಣಾ’ ಪಂಚಭೂತಗಳಲ್ಲಿ ಲೀನ: ‘ಅಚ್ಚಕನ್ನಡ ನಿರೂಪಕಿ’ ಇನ್ನೂ ‘ನೆನಪು’ ಮಾತ್ರ | Anchor Aparna