ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಂತಹ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಾನು ಮೂಗು ತೂರಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮದ ಎಂ ಡಿ ಮತ್ತು ಅಕೌಂಟೆಂಟ್ ಮಾತನಾಡಿರುವ ಸಂಭಾಷಣೆ ವೈರಲ್ ಆಗಿರುವ ಆಡಿಯೋದ ಕುರಿತು ಪ್ರತಿಕ್ರಿಯ ನೀಡಿದ ಅವರು, ಆಡಿಯೋ ಕುರಿತಂತೆ ನನಗೇನು ಗೊತ್ತಿಲ್ಲ. ನಾನು ಆಡಿಯೋವನ್ನು ಕೇಳಿಲ್ಲ. ಅಲ್ಲದೆ ಪ್ರಕರಣದ ಕುರಿತು ಮುಕ್ತವಾಗಿ ತನಿಖೆ ನಡೆಯಬೇಕೆಂದು ಸ್ವತಹ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಈ ಒಂದು ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಎಂದು ಸ್ವತಹ ಸಚಿವರೆ ಹೇಳಿಕೆ ನೀಡಿದ್ದಾರೆ ಅದಾದ ಬಳಿಕ ಎಸ್ಐಟಿ ಅವರು ಅವರಿಗೆ ನೋಟಿಸ್ ನೀಡಿದ್ದಾರೆ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ ಹಿಂದೂ ವಿಚಾರಣೆಗೆ ಕೂಡ ಅವರು ಹಾಜರಾಗಿದ್ದರು. ಹಾಗಾಗಿ ಈ ಒಂದು ಹಗರಣದಲ್ಲಿ ನಾನು ಮೂಗು ತೂರಿಸುವುದಿಲ್ಲ. ಭ್ರಷ್ಟಾಚಾರದಲ್ಲಿ ನಮ್ಮ ಮಂತ್ರಿ ಶಾಸಕರ ಪಾತ್ರವಿಲ್ಲ. ಆದರೆ ಇದರಲ್ಲಿ ಬೇರೆಯವರು ಭಾಗಿಯಾಗಿದ್ದಾರೆ ಎಂದರು.
ಸೋರಿಕೆಯಾಗಿರುವ ಆಡಿಯೋದಲ್ಲಿ ಹಗರಣದ ಕುರಿತು ಅಧ್ಯಕ್ಷರಿಗೆ ತಿಳಿಸೋನಾ ಎಂದು ಪರಶುರಾಮ ಹೇಳುತ್ತಾರೆ.ಆದರೆ ಪದ್ಮನಾಭ ಅವರು ಸ್ವಲ್ಪ ದಿನ ಬಿಟ್ಟು ಹೇಳೋಣ ಎಂದು ಹೇಳುತ್ತಾರೆ. ಹೀಗಾಗಿ ಹಗರಣದಲ್ಲಿ ಸಚಿವರ ಮತ್ತು ಅಧ್ಯಕ್ಷರ ಪಾತ್ರ ಏನು ಇಲ್ಲ ಎನ್ನುವುದು ಈ ಒಂದು ಅಡೆಮಾ ಮೂಲಕವೇ ಸ್ಪಷ್ಟವಾಗುತ್ತಿದೆಯಲ್ಲ? ನೀವು ಹೇಳುತ್ತಿರುವ ಮಾತಿನಲ್ಲೇ ಸಚಿವರ ಹಾಗೂ ಅಧ್ಯಕ್ಷರ ಪಾತ್ರವಿಲ್ಲ ಎಂಬುದು ಸ್ಪಷ್ಟವಾಗಿದೆ ನಾನು ಆಡಿಯೋ ಏನು ಕೇಳಿಸಿಕೊಂಡಿಲ್ಲ ನಿಮ್ಮ ಮೂಲಕವೇ ನನಗೆ ಈ ವಿಚಾರ ತಿಳಿದಿದೆ ಎಂದು ಅವರು ತಿಳಿಸಿದರು.