ಬೆಂಗಳೂರು : ರಾಜಕೀಯ ಅಥವಾ ಕೋಮುವಾದ ಉದ್ದೇಶದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ನ್ಯಾಯಾಲಯ ಪುರಸ್ಕರಿಸುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ದ್ವೇಷದ ಭಾಷಣಕಾರರ ವಿರುದ್ಧ ವಿಶೇಷ ಕ್ರಮ ಜರುಗಿಸಿ ಎಂದು ಕೋರಿ ಸಲ್ಲಿಸಿದ್ದ ಪಿಐಎಲ್ ಅರ್ಜಿ ಇದೀಗ ಹೈಕೋರ್ಟ್ ವಜಾಗೊಳಿಸಿದೆ.
ಹೌದು ದ್ವೇಷ ಭಾಷಣಕಾರರ ವಿರುದ್ಧ ವಿಶೇಷ ಕ್ರಮ ಕೋರಿ ಮೊಹಮ್ಮದ್ ಖಲಿ ಮುಲ್ಲಾ ಸಲ್ಲಿಸಿದ ಪಿಐಎಲ್ ಅರ್ಜಿಯನು ಇದೀಗ ಹೈಕೋರ್ಟ್ ವಜಾಗೊಳಿಸಿದೆ. ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ಅವರು ಅರ್ಜಿ ಸಲ್ಲಿಸಿ ಕೋರಿದ್ದರು ಎನ್ನಲಾಗಿದೆ.
ಅರ್ಜಿ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ರಾಜಕೀಯ ಅಥವಾ ಕೋಮುವಾದ ಉದ್ದೇಶದ ಅರ್ಜಿ ಪುರಸ್ಕರಿಸಲಾಗುವುದಿಲ್ಲ. ಪಿಐಎಲ್ ನ ಅಂಶಗಳು ನಿಖರವಾಗಿರದೆ ಅಸ್ಪಷ್ಟವಾಗಿವೆ. ಸಾರ್ವಜನಿಕ ಹಿತಾಸಕ್ತಿಗಿಂತ ಬೇರೆ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ. ರಾಜಕೀಯ ಅಥವಾ ಕೋಮುವಾದ ಉದ್ದೇಶದ ಪಿಐಎಲ್ ಪುರಸ್ಕರಿಸಲಾಗದು ಎಂದು ಸಿಜೆ ಎನ್ವಿ ಅಂಜಾರಿಯಾ ಹಾಗೂ ಕೆ.ವಿ ಅರವಿಂದ್ ಅವರಿಂದ ಪೀಠ ಈ ಆದೇಶ ಹೊರಡಿಸಿದೆ.
ದ್ವೇಷದ ಭಾಷಣಕಾರರ ವಿರುದ್ಧ ವಿಶೇಷ ಕ್ರಮ ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಕೆ ಎಸ್ ಈಶ್ವರಪ್ಪ, ಸಿಟಿ ರವಿ, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರನ್ನು ಪ್ರತಿ ವಾದಿಯಾಗಿಸಿದ್ದ PIL ಅನ್ನು ಇದೀಗ ಹೈಕೋರ್ಟ್ ವಜಾಗೊಳಿಸಿದೆ.