ಶಿವಮೊಗ್ಗ : ರಾಜ್ಯದಲ್ಲಿ ಡೇಂಗಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದುವರೆಗೂ ಸೊಂಕಿಗೆ 7 ಜನರು ಬಲಿಯಾಗಿದ್ದಾರೆ. ಇದೀಗ ಶಿವಮೊಗ್ಗದಲ್ಲಿ ಶಂಕಿತ ಡೆಂಘಿಗೆ ಮಹಿಳೆಯೋಬ್ಬರು ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ರಶ್ಮಿ ಆರ್ ನಾಯಕ್ (42) ಎನ್ನುವ ಮಹಿಳೆ ಸಾವನ್ನಪ್ಪಿದ್ದಾರೆ. ರಶ್ಮಿ ನಾಯಕ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ನಿವಾಸಿ ಎಂದು ತಿಳಿದು ಬಂದಿದೆ.ಕಳೆದ 15 ದಿನಗಳಿಂದ ರಶ್ಮಿ ಅವರು ಜ್ವರದಿಂದ ಬಳಲುತ್ತಿದ್ದರು.ಇದೀಗ ಅವರು ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.