ಬೆಂಗಳೂರು: ಸೈಬರ್ ಕಳ್ಳರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನತೆಯ ಸೈಬರ್ ಖಾತೆಯಿಂದ ಹಣವನ್ನು ಕದಿಯಲು ದಿನನಿತ್ಯ ಹೊಸ ಹೊಸ ಐಡಿಯಾಗಳನ್ನು ಪ್ರಯೋಗ ಮಾಡುತ್ತಿದ್ದಾರೆ.
ಈಗ ಈ ಸಾಲಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೌದು, ಮನೆಯ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಕಳುಹಿಸಿ, ಲಕ್ಷಾಂತರ ರೂಪಾಯಿ ಬಹುಮಾನ ಬಂದಿದೆ ಅಂತ ಪೋಸ್ಟ್‌ವೊಂದನ್ನು ಕಳುಹಿಸಿದ್ದು, ಮಲ್ಲಿಕಾರ್ಜುನ ಎನ್ನುವವರು ಟ್ವಿಟ್ಟರ್ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಅವರು ಹೇಳುವಂತೆ, ವುದೋ ಒಂದು ವಿಳಾಸದಿಂದ ರಿಜಿಸ್ಟರ್ ಪೋಸ್ಟ್ ಕಳುಹಿಸಿ, . ಕವರ್ ಮೇಲೆ ಬಾರ್ ಕೋಡ್ ಮುದ್ರಿತವಾಗಿರುತ್ತದೆ. ಕವರ್ ಓಪನ್ ಮಾಡಿದಾಗ ಅದರಲ್ಲಿ ಕೂಪನ್ ಇರುತ್ತದೆ ಅದರಲ್ಲಿ ಕಂಪೆನಿಯ ಹೆಸರಿನಲ್ಲಿ ಪ್ರಿಂಟ್ ಆಗಿರುವ ಕೂಪನ್ ಜೊತೆಗೆ, ಒಂದು ಅಪ್ಲಿಕೇಶನ್ ಇರುತ್ತದೆ. ಕೂಪನ್ ನಲ್ಲಿ ಹನ್ನೆರಡು ಲಕ್ಷ ಬಹುಮಾನ ಎನ್ನುವುವದನ್ನು ಕಾಣಬಹುದಾಗಿದೆ.
ಈ ನಡುವೆ ಖಾಲಿ ಅಪ್ಲಿಕೇಶನ್, ಕೋಲ್ಕತ್ತಾ ವಿಳಾಸವನ್ನು ಹೊಂದಿರುತ್ತದೆ. ಕೂಪನ್ ಅನ್ನು ಸ್ಕ್ರಾಚ್ ಮಾಡಿದರೆ 12,80,000 ಹಣ ಬಂದಿದೆ ಎಂದು ಪ್ರಿಂಟ್ ಆಗಿರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು SMS ( ನಂಬರ್ ಒಂದು ಪ್ರಿಂಟ್ ಆಗಿರುತ್ತದೆ) ಕಳುಹಿಸಿ ಅಥವಾ ಕೂಪನ್ ಮೇಲಿರುವ ಸ್ಕ್ಯಾನರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಎಂದು ಬರೆದಿರುತ್ತಾರೆ. ದುಡ್ಡಿನ ಆಸೆಗಾಗಿ ಸ್ಕ್ಯಾನ್ ಮಾಡಿದರೆ ನೀವು ಹಣವನ್ನು ಕಳೆದುಕೊಳ್ಳುವ ಸಂಭವ ಹೆಚ್ಚಿಸುತ್ತದೆ.
SCAM ALERT: ಈ ತರ ಒಂದು ಪತ್ರ ನಮ್ಮನೆಗೂ ಒಂದು ಸಲ ಬಂದಿತ್ತು. ಎಲ್ಲರೂ ಎಚ್ಚರಿಕೆ ಇಂದ ಇರಿ ಪ್ರೆಂಡ್ಸ್. pic.twitter.com/AEkWPAnELn
— Mal-Lee | ಮಲ್ಲಿ (@MallikarjunaNH) July 8, 2024