ಬೆಂಗಳೂರು : ಸದ್ಯ ರಾಜ್ಯದಲ್ಲಿ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇಮ ಸಿದ್ದರಾಮಯ್ಯ ಅವರ ಪತ್ನಿ ಹೆಸರಲ್ಲಿ ಅಕ್ರಮವಾಗಿ ಸೈಟು ಹಂಚಿಕೆ ಆಗಿರುವ ಆರೋಪದ ಕುರಿತಾಗಿ ಭಾರಿ ಚರ್ಚೆ ನಡೆಯುತ್ತಿದ್ದು ಇದೀಗ ಆರ್‌ಟಿಐ ಕಾರ್ಯಕರ್ತ ನೊಬ್ಬ ಸಿಎಂ ಸಿದ್ದರಾಮಯ್ಯ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಸ್ಪೋಟಕ ಆರೋಪ ಮಾಡಿದ್ದಾರೆ.
ಆರ್ ಟಿ ಐ ಕಾರ್ಯಕರ್ತ ಗಂಗರಾಜು ಎನ್ನುವವರು ಸುದ್ದಿಗಾರರೊಂದಿಗೆ ಮಾತನಾಡಿ, 2018ರ ಅಫಿಡವಿಟ್ ನಲ್ಲಿ ಆಸ್ತಿ ಘೋಷಿಸಿದ್ದಾರೆ. 2013 ನಲ್ಲಿ ಆಸ್ತಿ ಘೋಷಿಸಿಲ್ಲವೆಕೆ? 2010ರಲ್ಲಿ ಖರೀದಿಸುವ ಆಸ್ತಿ ಮುಚ್ಚಿಟ್ಟಿದ್ದು ಯಾಕೆ? ಬಹುಶಹ 2014ರಲ್ಲಿ ನಕಲಿ ದಾಖಲೆ ಸೃಷ್ಟಿಸಿರಬಹುದು. ಹಾಗಾಗಿ 2013ರ ಅಫಿಡಿವೆಟ್ ನಲ್ಲಿ ದಾಖಲಿಸಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ.
2013ರಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು.ಸಿಎಂ ಆದಾಗ ಒಂದೊಂದೇ ದಾಖಲೆ ಸೃಷ್ಟಿಸಿದಾರ? ಸುಳ್ಳು ದಾಖಲೆ ಸೃಷ್ಟಿ ಪರಿಹಾರಕ್ಕಾಗಿ ಪಿತೂರಿ ನಡೆಸಿದ್ದಾರಾ? ಸಿದ್ದರಾಮಯ್ಯ ಪಡೆಯದಿರುವ ನಿವೇಶನ ಮರಳಿಸಬೇಕು ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.