ಬೆಂಗಳೂರು : 2024-25ನೇ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ, ಹೊಸ ಕೋರ್ಸ್/ವಿಷಯಗಳನ್ನು ಪ್ರಾರಂಭಿಸಲು ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಆಯುಕ್ತಾಲಯದ ಏಕಕಡತದಲ್ಲಿ ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಇವರು ಕನಿಷ್ಠ ವೆಚ್ಚದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮಾರುಕಟ್ಟೆ ಬೇಡಿಕೆ ಇರುವ ಹೊಸ ಕೋರ್ಸ್ ಗಳಿಗೆ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾದಲ್ಲಿ, ಮುಂದಿನ ಔದ್ಯೋಗಿಕ ಮಾರುಕಟ್ಟೆಗೆ ಸೂಕ್ತ ಹಾಗೂ ಉಪಯುಕ್ತವಾಗಿರುವ ಈ ಕೋರ್ಸ್ಗಳು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗುವುದರ ಜೊತೆಗೆ ಉನ್ನತ ಶಿಕ್ಷಣದ ಸಾಮಾನ್ಯ ಪ್ರವೇಶಾತಿ ಅನುಪಾತ (GER) ಕೂಡ ಹೆಚ್ಚಲು ಸಾಧ್ಯವಾಗುವುದರಿಂದ, 2024-25ನೇ ಶೈಕ್ಷಣಿಕ ಸಾಲಿಗೆ ನೂತನ ಕೋರ್ಸ್ಗಳು ಹಾಗೂ ವಿಷಯಗಳನ್ನು ಪ್ರಾರಂಭಿಸಲು ಮನವಿ ಸಲ್ಲಿಸಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಂದ ಈಗಾಗಲೇ ಮೂಲಭೂತ ಸೌಲಭ್ಯಗಳಿರುವ ಕುರಿತು ಪ್ರಾಂಶುಪಾಲರಿಂದ ಮಾಹಿತಿ ಪಡೆಯಲಾಗಿದ್ದು ಕಟ್ಟಡ, ಪೀಠೋಪಕರಣ ಹಾಗೂ ಕಂಪ್ಯೂಟರ್ ಮೂಲಭೂತ ಸೌಕರ್ಯಗಳ ಕೊರತೆ ಇರುವ ಕೆಲವೇ ಕೆಲವು ಕಾಲೇಜುಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಎರಡು ಪಾಳಿಯಲ್ಲಿ ತರಗತಿಗಳನ್ನು ನಡೆಸಲು ಪ್ರಾಂಶುಪಾಲರು ಸಿದ್ಧರಿರುವ ಕುರಿತು ಖಚಿತಪಡಿಸಿಕೊಂಡು, 2023-24ನೇ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇರುವ ಮೂಲಭೂತ ಸೌಕರ್ಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು, ಸಂಬಂಧಿಸಿದ ವಿಶ್ವವಿದ್ಯಾಲಯಗಳಿಂದ Affiliation ಪಡೆದು, ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯುಂಟಾಗದಂತೆ ಎಚ್ಚರವಹಿಸಿ, ಹೊಸ ಕೋರ್ಸ್/ವಿಷಯಗಳನ್ನು ಪ್ರಾರಂಭಿಸುವ ಸಾಧ್ಯತೆಯುಳ್ಳ ಕಾಲೇಜುಗಳ ಹಾಗೂ ಕೋರ್ಸ್ಗಳ ಮಾಹಿತಿಯನ್ನು ಅನುಬಂಧ-1, 2, 3 ಮತ್ತು 4 ರಲ್ಲಿ ಲಗತ್ತಿಸಿ, ಸದರಿ ಕಾಲೇಜುಗಳು ನೂತನ ವಿಷಯ ಹಾಗೂ ಕೋರ್ಸ್ಗಳನ್ನು ವಿದ್ಯಾರ್ಥಿಗಳು ಹಾಗೂ ಪೋಷಕರ ಬೇಡಿಕೆಯ ಮೇರೆಗೆ 2024-25 ನೇ ಸಾಲಿನಿಂದ ಪ್ರಾರಂಭಿಸುವ ಸಲುವಾಗಿ ಅನುಮೋದನೆ ಕೋರಿರುತ್ತಾರೆ.
ಆಯುಕ್ತಾಲಯವು ಸಲ್ಲಿಸಿರುವ ಪುಸ್ತಾವನೆಯನ್ನು ಪರಿಶೀಲಿಸಿ, ಓದಲಾದ ಏಕಕಡತದಲ್ಲಿ ಪ್ರಸ್ತಾಪಿಸಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳುಗಳಲ್ಲಿ ಹೊಸ ವಿಷಯ/ಕೋರ್ಸ್ಗಳನ್ನು ಪ್ರಾರಂಭಿಸಲು ಸರ್ಕಾರವು ತೀರ್ಮಾನಿಸಿ, ಅದರಂತೆ, ಈ ಕೆಳಕಂಡ ಆದೇಶ..
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಬೇಡಿಕೆಯ ಮೇರೆಗೆ, ಸದರಿ ಕಾಲೇಜುಗಳಲ್ಲಿ ಇರುವ ಮೂಲಭೂತ ಸೌಕರ್ಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು, ಸಂಬಂಧಿಸಿದ ವಿಶ್ವವಿದ್ಯಾಲಯಗಳಿಂದ Affiliation ಪಡೆದು, ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯುಂಟಾಗದಂತೆ ಎಚ್ಚರವಹಿಸಿ, ಹೊಸ ಕೋರ್ಸ್/ವಿಷಯಗಳನ್ನು ಪ್ರಾರಂಭಿಸುವ ಸಾಧ್ಯತೆಯುಳ್ಳ ಕಾಲೇಜುಗಳ ಹಾಗೂ ಕೋರ್ಸ್ಗಳ ಮಾಹಿತಿಯನ್ನು ಅನುಬಂಧ -1, 2, 3 ಮತ್ತು 4 ರಲ್ಲಿರುವಂತೆ ಪ್ರಾರಂಭಿಸಲು ಸರ್ಕಾರವು ಅನುಮತಿ ಆದೇಶಿಸಿದೆ.