ಧಾರವಾಡ: ರಾಜ್ಯದಲ್ಲಿ ಶ್ರೀರಾಮಸೇನೆಯಿಂದ ಲವ್ ಜಿಹಾದ್ ತಡೆಗೆ ಅಭಿಯಾನ ಆರಂಭಿಸಲಾಗಿದೆ. ಇದರ ಸಲುವಾಗಿ ಶ್ರೀರಾಮಸೇನೆಯಿಂದ ಸಹಾಯವಾಣಿ ಕೂಡ ಆರಂಭಿಸಲಾಗಿದ್ದು, ಅದಕ್ಕೆ ಹೆಚ್ಚು ಬೆದರಿಕೆ ಕರೆಗಳೇ ಬರುತ್ತಿರೋದಾಗಿ ತಿಳಿದು ಬಂದಿದೆ.
ಧಾರವಾಡ ಶ್ರೀರಾಮಸೇನಾ ಕರ್ನಾಟಕ ಕೇಂದ್ರದಿಂದ ಲವ್ ಜಿಹಾದ್ ಗೆ ತಡೆ ನೀಡುವ ಸಲುವಾಗಿ ಸಹಾಯವಾಣಿ ಆರಂಭಿಸಲಾಗಿದೆ. ಲವ್ಜಿಹಾದ್ ಸಂಬಂಧ 9090443444ಗೆ ಕರೆ ಮಾಡಿ ತಿಳಿಸುವಂತೆ ಮನವಿ ಮಾಡಿದೆ.
ಈ ಸಹಾಯವಾಣಿ ಸಂಖ್ಯೆ ಆರಂಭಿಸಿದ ನಂತ್ರ ಮೊದಲ ದಿನವೇ ಅಭೂತಪೂರ್ವ ಸ್ಪಂದನೆ ದೊರೆತಿದೆ. 148 ಕರೆಗಳನ್ನು ಸ್ವೀಕರಿಸಲಾಗಿದೆ. ಅವುಗಳಲ್ಲಿ ತಾಯಂದಿರು 37 ಕರೆಗಳನ್ನು ಮಾಡಿದ್ರೇ, ಪ್ರೋತ್ಸಾಹಕ ಕರೆಯಾಗಿ 42 ಸ್ವೀಕರಿಸಲಾಗಿದೆ. ಇನ್ನೂ ಲವ್ ಜಿಹಾದ್ ಸಂತ್ರಸ್ತರ ಕರೆಗಳು 52 ಬಂದಿದೆ. ಬೆದರಿಕೆ ಕರೆಗಳು 170ಕ್ಕೂ ಹೆಚ್ಚು ಬಂದಿರೋದಾಗಿ ಶ್ರೀರಾಮ ಸೇನೆಯ ಮುಖಂಡ ಗಂಗಾಧರ ಕುಲಕರ್ಣಿ ಮಾಹಿತಿ ನೀಡಿದ್ದಾರೆ.
ಇನ್ಮುಂದೆ SP-DCP-IG ಗಳು ಪ್ರತಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ: ಸಿಎಂ ಸೂಚನೆ
ಅಸ್ಸಾಂ ಪ್ರವಾಹ ಪರಿಸ್ಥಿತಿ ಗಂಭೀರ, 30 ಜಿಲ್ಲೆಗಳಲ್ಲಿ 24.50 ಲಕ್ಷ ಜನರಿಗೆ ತೊಂದರೆ