ಮಂಡ್ಯ: ಜಿಲ್ಲೆಯಲ್ಲಿ ಇಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸತತ 7 ಗಂಟೆಗಳ ಕಾಲ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಿದರು. ಇಂದಿನ ಜನಸ್ಪಂದನ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು ಬರೋಬ್ಬರಿ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸ್ವೀಕಾರಗೊಂಡಿವೆ.
ಇಂದಿನ ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ದರ್ಶನದ ಬಳಿಕ ಮಾತನಾಡಿ, ಜನತಾ ದರ್ಶನದಲ್ಲಿ 3 ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿವೆ. ನಾನೇ ಖುದ್ದು ನಿರಂತರವಾಗಿ 7 ಗಂಟೆಗಳ ಕಾಲ ಜನರ ಆಹ್ವಾಲು ಸ್ವೀಕಾರ ಮಾಡಿದ್ದೇನೆ. ಹೆಚ್ಚಿನ ರೀತಿಯಲ್ಲಿ ಕಂದಾಯ ಇಲಾಖೆ ಸಂಬಂಧಿಸಿದ ಅರ್ಜಿ ಬಂದಿವೆ. ನಿವೇಶನ, ಮನೆ ಇಲ್ಲ ಅಂತ ಅರ್ಜಿ ಬಂದಿದೆ. ಹಲವಾರು ಯುವಕರು, ಹೆಣ್ಣು ಮಕ್ಕಳು ಉದ್ಯೋಗಕ್ಕೆ ಮನವಿ ಮಾಡಿದ್ದಾರೆ. ನಿರುದ್ಯೋಗ, ನಿವೇಶನ, ಮನೆಗಳ ಸಮಸ್ಯೆಗಳು ಇವೆ ಎಂದರು.
ಆರೋಗ್ಯ ಸಮಸ್ಯೆಯ ವರ್ಗದ ಜನರು ಇದ್ದಾರೆ. ವಿಕಲಚೇತನರ ಅರ್ಜಿಯನ್ನು ಸಹ ಸ್ವೀಕಾರ ಮಾಡಿದ್ದೇನೆ. ರಸ್ತೆ ಅಭಿವೃದ್ಧಿ, ಹೈವೆ ಸಂಬಂಧ ಸಮಸ್ಯೆ ವಿರುದ್ದ ಅರ್ಜಿ ಕೊಟ್ಟಿದ್ದಾರೆ. ಸಮುದಾಯ ಭವನ ನಿರ್ಮಾಣಕ್ಕೂ ಅರ್ಜಿ ಬಂದಿದೆ. ಸಂಬಂಧಿಸಿದ ಇಲಾಖೆಗೆ ತಲುಪಿಸುವ ಕೆಲಸ ಮಾಡ್ತೇನೆ. ಎರಡೂ ಮೂರು ತಿಂಗಳು ಅವಕಾಶ ಕೊಡಿ ನಿರುದ್ಯೋಗ ಸಮಸ್ಯೆ ನಿವಾರಿಸುತ್ತೇನೆ ಎಂದರು.
ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಸ್ಥಾನ ಸಿಕ್ಕಿದೆ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಆಲೋಚನೆ ಇದೆ. ದೆಹಲಿಯ ಕಚೇರಿಯಲ್ಲಿ ಸಭೆ ನಡೆಸಿ ಮಾಹಿತಿ ಪಡೆಯುತ್ತಿದ್ದೇನೆ. ದೇಶದಲ್ಲಿ ಕೆಲವು ಕೈಗಾರಿಕೆಗಳು ಸ್ಥಗಿತಗೊಂಡಿವೆ ಅವುಗಳಿಗೆ ಹೊಸ ಜೀವ ತುಂಬುವ ಕೆಲಸ ಮಾಡ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಸ್ಪಂದನೆ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಲ್ಲ. ಮೂಲಭೂತ ಸೌಕರ್ಯಗಳ ಕೊರತೆ ಇದೆ. ಮಂಡ್ಯ ಜನರು ನಿವೇಶನ ಬೇಡಿಕೆ ಇದೆ ಮಂಡ್ಯ ಅಭಿವೃದ್ಧಿಗೆ ಹಣ ಕೊಡಲು ಮುಂದಾಗಿದ್ದೇನೆ. ಅಧಿಕಾರಿಗಳು ಸ್ಪಂದಿಸುತ್ತಾರೆ ಅನ್ನೊ ನಿರೀಕ್ಷೆ ಇದೆ. ರಾಜಕಾರಣ ಬೇರೆ ರಾಜ್ಯದ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಚುನಾವಣಾ ಮುಂಚೆ ಜನತಾ ದರ್ಶನ ಮಾಡಿದ್ರು. ಆ ಸಮಸ್ಯೆಗಳನ್ನು ಎಷ್ಟು ಬಗೆ ಹರಿಸಿದ್ದಾರೆ ಅನ್ನೋದು ಎದ್ದು ಕಾಣುತ್ತಿದೆ. ರಾಜ್ಯ ಸರ್ಕಾರ ಮುಂದೆ ಜನರು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿ ಎಂದರು.
ರಾಜ್ಯ ಸರ್ಕಾರದ ಹಗರಣದ ಚರ್ಚೆ ನಡೆಯುತ್ತಿದೆ ಮುಂದೆ ಮುಖ್ಯಮಂತ್ರಿಗೆ ಸುತ್ತಿಕೊಳ್ಳುವ ವಾತಾವರಣ ಇದೆ. ಕಾಂಗ್ರೆಸ್ ನಾಯಕರು ಹಿಂದಗಡೆಯಿಂದ ಪ್ರೇರಪಣೆ ಕೊಡ್ತಿದ್ದಾರೆ. ವಾಲ್ಮೀಕಿ ನಿಗಮದ ಹಗರಣ, ನಗರಾಭಿವೃದ್ಧಿ ಇಲಾಖೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ರೀತಿಯ ಅಧಿಕಾರ ಎಷ್ಟು ದಿನ ಮಾಡ್ತಿರಿ? ಎಂದು ಪ್ರಶ್ನಿಸಿದರು.
ಮೈಸೂರಿನಲ್ಲಿ 50:50 ಮೂಡ ಹಗರಣ ಚರ್ಚೆಯಲ್ಲಿದೆ. ಜನರು ಅಧಿಕಾರ ಕೊಟ್ಟಿದ್ದಾರೆ ಶಾಶ್ವತ ಅಂತ ಭ್ರಮೆಯಲ್ಲಿದ್ರೆ ಜನರು ತಿರುಗಿಬಿಳುವ ಮುನ್ನ ಎಚ್ಚೆತ್ತುಕೊಳ್ಳಿ. ನಾನು ಅಧಿಕಾರಿಗಳ ಸಭೆಯ ಸುತ್ತೋಲೆ ಹೊರಡಿಸಿಲ್ಲ ಯಡಿಯೂರಪ್ಪ ಕಾಲದಲ್ಲಿ ಹೊರಡಿಸಿದ್ದು ಮುಂದುವರಿದಿದೆ ಅಷ್ಟೆ. ನನಗೆ ಅದರ ಎಫೆಕ್ಟ್ ಇಲ್ಲ ಎಂದರು.
ಕೇಂದ್ರದ ಮಂತ್ರಿಯಾಗಿ ಜನರ ಕಷ್ಟ ಸುಖ ಕೇಳಲು ಬಂದಿದ್ದೇನೆ. ನಮ್ಮ ಪಕ್ಷದ ಕ್ಷೇತದ ನಮ್ಮ ಹಳೆಯ ಜಿಲ್ಲೆಯ ಎಂಪಿ ಅಧಿಕಾರಿಗಳ ದಂಡನ್ನ ಜೊತೆಯಲ್ಲಿ ಕರೆದು ಜನ ಸ್ಪಂದನ ಕಾರ್ಯಕ್ರಮ ಮಾಡಿದ್ರು ಈ ಸರ್ಕಾರ ಸುತ್ತೋಲೆ ಹೊರಡಿಸಿಲ್ಲ. ಜಿಲ್ಲಾಧಿಕಾರಿ ,ಸಿಇಓ ಸುತ್ತೋಲೆ ಹೊಡರಿಸಿದ್ರು. ನೆನ್ನೆ ತಾರತುರಿಯಲ್ಲಿ ಸುತ್ತೋಲೆ ಹೊರಡಿಸುವ ಅವಶ್ಯಕತೆ ಇತ್ತ? ಈ ರೀತಿಯ ನಡೆದುಕೊಳ್ಳುವುದು ಸರಿಯಲ್ಲ. ಜನತಾ ದರ್ಶನ ಮಾಡಲು ಎಂಎಲ್ ಎ ಗೆ ಪವರ್ ಇಲ್ವಾ? ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿಗಳಿಗೆ ಅವಕಾಶ ಇದೆ. ಅವರವರದೆ ಲಿಮಿಟೇಷನ್ ಇದೆ. ಕೇಂದ್ರದ ಮಂತ್ರಿಗೆ ಯಾವ ರೀತಿ ಸೆಕ್ಯುರಿಟಿ ಕೊಡಬೇಕು ಅನ್ನೋ ಜ್ಞಾನ ಸರ್ಕಾರಕ್ಕಿದ್ಯಾ? ಎಂದು ಕೇಳಿದರು.
ವರದಿ: ಗಿರೀಶ್ ರಾಜ್, ಮಂಡ್ಯ
ಶೀಘ್ರವೇ KSRTC ಪ್ರಯಾಣಕರಿಗೆ ‘ಹೈಫೈ ಪ್ರಯಾಣ’ದ ಟಚ್: ಹೊಸ ಮಾದರಿಯ ಬಸ್ ವೀಕ್ಷಿಸಿದ ‘ಸಚಿವ ರಾಮಲಿಂಗಾರೆಡ್ಡಿ’
‘ಮುಖ್ಯಮಂತ್ರಿ ಕುರ್ಚಿ’ ಮೇಲೆ ಕಣ್ಣಿಟ್ಟವರಿಂದಲೇ ‘ಮುಡಾ ಹಗರಣ’ ಬಹಿರಂಗ: ‘HDK’ ಗಂಭೀರ ಆರೋಪ