ಬೆಂಗಳೂರು : ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 17 ಸ್ಥಾನಗಳನ್ನು ಪಡೆದುಕೊಂಡಿದ್ದು, ಕಾಂಗ್ರೆಸ್ 9 ಸ್ಥಾನ ಪಡೆದುಕೊಂಡು ಜೆಡಿಎಸ್ ಮೂರರಲ್ಲಿ ಎರಡು ಸ್ಥಾನ ಪಡೆದುಕೊಂಡಿತು. ಈಗ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಬಿ ಶ್ರೀರಾಮುಲು ನನ್ನ ಸೋಲಿಗೆ ಬೇರೆ ಯಾರು ಕಾರಣ ಅಲ್ಲ ನಾನೇ ಕಾರಣ ಎಂದು ತಿಳಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಬೇರೆ ಯಾರು ಕಾರಣ ಅಲ್ಲ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ನನ್ನ ಸೋಲಿಗೆ ನಾನೇ ಕಾರಣನಾಗಿದ್ದೇನೆ ಎಂದು ಬೆಂಗಳೂರಿನಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮಲು ಹೇಳಿಕೆ ನೀಡಿದರು. ನಿಮ್ಮ ಸೋಲಿಗೆ ಕಾರಣ ಏನು ಅಂತ ರಾಧಾ ಮೋಹನ್ದಾಸ್ ಕೇಳಿದಾಗ ಸೋಲಿಗೆ ವೈಯಕ್ತಿಕವಾಗಿ ನಾನೇ ಕಾರಣ ಅಂತ ಹೇಳಿದ್ದೇನೆ ಎಂದರು.
ಬಳ್ಳಾರಿ ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಅಂದಿದ್ದೇನೆ. ಇನ್ನೂ ಸಂಡೂರು ವಿಧಾನಸಭೆ ಉಪಚುನಾವಣೆ ಟಿಕೆಟ್ ಕೇಳಿಲ್ಲ. ಆದರೆ ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆಯೋ ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ತಿಳಿಸಿದರು.