ನವದೆಹಲಿ: ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಬುಧವಾರ ಉನ್ನತ ಹುದ್ದೆಗೆ ರಾಜೀನಾಮೆ ನೀಡಿದ್ದು, ಹೇಮಂತ್ ಸೊರೆನ್ ಮತ್ತೆ ಸಿಎಂ ಆಗಿ ಮರಳಲು ವೇದಿಕೆ ಕಲ್ಪಿಸಿದ್ದಾರೆ. ಮೂಲಗಳ ಪ್ರಕಾರ, ಜಾರಿ ನಿರ್ದೇಶನಾಲಯದ ಬಂಧನದ ನಂತರ ಅಧಿಕಾರದಿಂದ ಕೆಳಗಿಳಿಯಲು ಒತ್ತಾಯಿಸಲ್ಪಟ್ಟ ಸುಮಾರು ಐದು ತಿಂಗಳ ನಂತರ ಹೇಮಂತ್ ಸೊರೆನ್ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಮರಳಲು ಸಜ್ಜಾಗಿದ್ದಾರೆ.
ಅಂದ್ಹಾಗೆ, ಭೂ ಹಗರಣ ಪ್ರಕರಣದಲ್ಲಿ ಸೊರೆನ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜೂನ್ 28 ರಂದು ಜಾಮೀನು ನೀಡಿದೆ. ಹೇಮಂತ್ ಸೊರೆನ್ ವಿರುದ್ಧದ ಇಡಿ ಆರೋಪವನ್ನ ಬೆಂಬಲಿಸುವ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
BREAKING : ರಾಹುಲ್ ಗಾಂಧಿ, ಖರ್ಗೆ ಸಮ್ಮುಖದಲ್ಲಿ BRS ನಾಯಕ ‘ಕೇಶವ ರಾವ್’ ಕಾಂಗ್ರೆಸ್ ಸೇರ್ಪಡೆ