ವಿಜಯಪುರ : ನಿನ್ನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿಯ ಕೃಷ್ಣ ನದಿಯ ತಟದಲ್ಲಿ 8 ಜನರು ಇಸ್ಪೀಟ್ ಆಡುತ್ತಿದ್ದರು. ಈ ವಿಚಾರ ತಿಳಿದು ಪೊಲೀಸರು ದಾಳಿ ಮಾಡಿದ್ದು, ತಪ್ಪಿಸಿಕೊಳ್ಳಲು ಎಂಟೂ ಜನರು ತೆಪ್ಪದಲ್ಲಿ ನದಿಯ ಮತ್ತೊಂದು ತಟಕ್ಕೆ ಹೋಗುತ್ತಿದ್ದ ವೇಳೆ ತೆಪ್ಪ ಮಗಚಿದೆ. ಐವರು ನೀರು ಪಾಲಾಗಿದ್ದು, ಮೂವರ ಮೃತ ದೇಹ ಸಿಕ್ಕಿದೆ.ಉಳಿದ ಇಬ್ಬರ ಮೃತದೆಹಕ್ಕಾಗಿ ಇದೀಗ ಶೋಧಕಾರ್ಯ ಮುಂದುವರೆದಿದೆ.
ನೀರು ಪಾಲಾಗಿದ್ದ ಪುಂಡಲೀಕ ಯಂಕಂಚಿ, ತಯ್ಯಬ್ ಚೌಧರಿ (40), ಕೊಲ್ಹಾರ ಪಟ್ಟಣದ ನಿವಾಸಿ ದಶರಥ ಗೌಡರ್ (54) ಮೃತದೇಹ ಪತ್ತೆಯಾಗಿವೆ. ಆಂಬುಲೆನ್ಸ್ ಮೂಲಕ ಮರಣೋತ್ತರ ಪರೀಕ್ಷೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಶವಗಳನ್ನು ರವಾನೆ ಮಾಡಲಾಗಿದೆ. ರಫೀಕ್ ಬಾಂಬೆ ಹಾಗೂ ಮೆಹಬೂಬ್ ವಾಲೀಕಾರಗಾಗಿ ಅಗ್ನಿಶಾಮಕ ದಳ, ಪೊಲೀಸರಿಂದ ಶೋಧಕಾರ್ಯ ನಡೆದಿದೆ.
ಘಟನೆ ಹಿನ್ನೆಲೆ?
ನಿನ್ನೆ ವಿಜಯಪುರ ಜಿಲ್ಲೆಯ ಕೋಲಾರ ಸಮೀಪ ಬಳುತಿ ಜಾಕ್ ವೆಲ್ ನಲ್ಲಿ ಕೃಷ್ಣಾ ನದಿ ತಟ್ಟದಲ್ಲಿ 8 ಜನರು ಇಸ್ಪೀಟ್ ಆಡಲು ಕುಳಿತಿದ್ದರು. ಇವಳೆ ಸ್ಥಳೀಯರು ಪೊಲೀಸರು ಬರುತ್ತಿರುವ ಸುದ್ದಿಯನ್ನು ಅವರಿಗೆ ತಿಳಿಸಿದ್ದಾರೆ. ಇದರಿಂದ ಹೆದರಿ ಎಂಟು ಜನ ಸೇರಿ ತೆಪ್ಪದಲ್ಲಿ ತೆಪ್ಪದಲ್ಲಿ ಕೃಷ್ಣಾ ನದಿಯ ನಡುಗಡ್ಡೇಗೆ ಹೋಗಲು ಮುಂದಾಗಿದ್ದಾರೆ.ಈ ವೇಳೆ ಜೋರಾಗಿ ಗಾಳಿ ಬೀಸಿದ್ದರಿಂದ ತೆಪ್ಪ ಮುಗುಚಿ ಬಿದ್ದಿದೆ.
ಈ ವೇಳೆ ಐದು ಜನರು ನೀರು ಪಾಲಾಗಿದ್ದು ಉಳಿದವರು ಈಸಿ ದಡ ಸೇರಿದ್ದಾರೆ. ಘಟನಾ ಸ್ಥಳಕ್ಕೆ ಬಿಜಾಪುರ ಎಸ್ಪಿ ಹಾಗೂ ಡಿ ಎಸ್ ಪಿ ಭೇಟಿ ನೀಡಿ ಪರಿಶೀಲನೇ ನಡೆಸುತ್ತಿದ್ದು, ಅಗ್ನಿಶಾಮಕದಳ ಸ್ಥಳದಲ್ಲಿ ಬಿಡು ಬಿಟ್ಟಿದೆ. ನಿನ್ನೆಯಿಂದ ಇಲ್ಲಿಯವರೆಗೆ ಮೂರು ಜನರ ಮತ ದೇಹಗಳನ್ನು ಹೊರ ತೆಗೆದಿದ್ದು ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿದುಬಂದಿದೆ.