ನವದೆಹಲಿ : ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ ಸಿಕ್ಕಿದ್ದು, ಸ್ಪೀಕರ್ ಲೋಕಸಭೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದರು.
ಇದಕ್ಕೂ ಮುನ್ನ “ಪ್ರಧಾನಿ ಭಾಷಣ ಮಾಡುವಾಗ, ಸಂಸದೀಯ ಶಿಷ್ಟಾಚಾರವನ್ನು ಪ್ರತಿಪಕ್ಷಗಳು ನಿರಂತರವಾಗಿ ಉಲ್ಲಂಘಿಸಿದ ರೀತಿ, ಇಡೀ ಸದನವು ಈ ಕೃತ್ಯವನ್ನು ಖಂಡಿಸುತ್ತದೆ ಎಂದು ನಾನು ಪ್ರಸ್ತಾಪಿಸುತ್ತೇನೆ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅಂದ್ಹಾಗೆ, ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಎರಡು ದಿನಗಳ ಚರ್ಚೆಗೆ ಪ್ರಧಾನಿ ಮೋದಿ ಉತ್ತರಿಸಿದರು. ಈ ವೇಳೆ ದೇಶದ ಜನರು ತಮ್ಮ ಸರ್ಕಾರಕ್ಕೆ ಸತತ ಮೂರನೇ ಅವಧಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಎಂದರು. ಇನ್ನು ತಮ್ಮ ಸರ್ಕಾರವು 10 ವರ್ಷಗಳ ಕಾಲ ಅವರಿಗೆ ಸೇವೆ ಸಲ್ಲಿಸಿದ ಸಮರ್ಪಣೆಯನ್ನ ಜನರು ನೋಡಿದ್ದಾರೆ ಎಂದು ಹೇಳಿದರು.
“ರಾಹುಲ್ ಮಗುವಿನಂತೆ ವರ್ತಿಸ್ತಿದ್ದಾರೆ” : ಲೋಕಸಭೆಯಲ್ಲಿ ‘ಪ್ರಧಾನಿ ಮೋದಿ’ ಭಾಷಣದ ಹೈಲೆಟ್ಸ್ ಇಲ್ಲಿದೆ!
ಉತ್ತರಕನ್ನಡ: ಪತ್ರಕರ್ತರು ಪ್ರಯಾಣಿಸುತ್ತಿದ್ದ ಕಾರಿನ ಕೆಳಗೆ ‘ನಾಡ ಬಾಂಬ್’ ಸ್ಫೋಟ : ತಪ್ಪಿದ ಭಾರಿ ಅನಾಹುತ
BREAKING: ಅತ್ಯಾಚಾರ ಆರೋಪ ಪ್ರಕರಣ: ವಕೀಲ ದೇವರಾಜೇಗೌಡ ಜೈಲಿನಿಂದ ಬಿಡುಗಡೆ