ಕೊಡಗು : ಪ್ರವಾಸಕ್ಕೆಂದು ಬಂದಿದ್ದ ಯುವಕನೊಬ್ಬ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಈಜಲು ತೆರಳಿ ನಿರುಪಾಲಾಗಿರುವ ಘಟನೆ ಕೊಡಗು ಜಿಲ್ಲೆ, ಕುಶಾಲನಗರ ತಾಲೂಕಿನ ಹೇರೂರು ಬಳಿ ಈ ಘಟನೆ ನಡೆದಿದೆ.
ಹೌದು ಹಾರಂಗಿ ಜಲಾಶಯದ ಹಿನ್ನಿರಿನಲ್ಲಿ ಪ್ರವಾಸಿಗ ನೀರುಪಾಲಾಗಿದ್ದಾನೆ. ಕೊಡಗು ಜಿಲ್ಲೆ, ಕುಶಾಲನಗರ ತಾಲೂಕಿನ ಬೇರೂರು ಬಳಿ ಈ ಘಟನೆ ನಡೆದಿದೆ. ನೀರುಪಾಲದ ಯುವಕನನ್ನು ಮೈಸೂರು ಮೂಲದ ಶಶಿ (30) ಎಂದು ಗುರುತಿಸಲಾಗಿದೆ.
ಮೈಸೂರಿನಿಂದ ಯುವಕ ಯುವತಿಯರು ಪ್ರವಾಸಕ್ಕೆ ಆಗಮಿಸಿದ್ದರು.ಈ ವೇಳೆ ಹಾರಂಗಿ ಜಲಾಶಯದ ನೀರಿನಲ್ಲಿ ಶಶಿ ಈಜಾಡುತ್ತಿದ್ದ ವೇಳೆ ನೀರು ಪಾಲಾಗಿದ್ದಾನೆ. ನೀರುಪಾಲಾದ ಶಶಿಗಾಗಿ ಇದೀಗ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ. ಸ್ಥಳಕ್ಕೆ ಸುಂಟಿಕೊಪ್ಪ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.