ರಾಮನಗರ : ಮಾಗಡಿ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಎ ಮಂಜು ಪೊಲೀಸರ ಮೇಲೆ ದರ್ಪ ತೋರಿದ್ದು, ಅಪಘಾತ ಪ್ರಕರಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಪೊಲೀಸರು ಹೆಲ್ಮೆಟ್ ಧರಿಸದ ವಾಹನಗಳನ್ನು ತಡೆಗಟ್ಟಿ ಪೊಲೀಸರು ದಂಡ ಹಾಕುತ್ತಿದ್ದರು. ಈ ವೇಳೆ ಸವಾರರು ಹಾಗೂ ಪೊಲೀಸರ ಮಧ್ಯ ಕಿರಿಕ್ ಉಂಟಾಗಿದ್ದು, ಸ್ಥಳಕ್ಕೆ ಬಂದ ಮಾಜಿ ಶಾಸಕ ಎ ಮಂಜು ಸ್ಥಳೀಯರಿಗೆ ದಂಡ ವಿಧಿಸದಂತೆ ಪೊಲೀಸರಿಗೆ ತಾಕೀತು ಮಾಡಿರುವ ಘಟನೆ ನಡೆದಿದೆ.
ಹೌದು ಇಂದು ಬೆಂಗಳೂರು-ಮಾಗಡಿ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಳ ಹಿನ್ನೆಲೆ ಹೆಲ್ಮೆಟ್ ಕಡ್ಡಾಯ ನಿಯಮದ ಪ್ರಕಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ದಂಡ ವಿಧಿಸುವಾಗ ವಾಹನ ಸವಾರರ ಜೊತೆ ಪೊಲೀಸ್ ಸಿಬ್ಬಂದಿ ಕಿರಿಕ್ ಆಗಿದೆ. ಇದೇ ವೇಳೆ ಸ್ಥಳಕ್ಕೆ ಬಂದಿದ್ದ ಮಾಗಡಿ ಮಾಜಿ ಶಾಸಕ ಎ.ಮಂಜುನಾಥ್ ಸ್ಥಳೀಯರಿಗೆ ದಂಡ ಹಾಕದಂತೆ ಪೊಲೀಸರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಎಸ್ಐ ನಮ್ಮ ನಿಯಮ ಏನಿದೆಯೋ ಅದನ್ನು ಪಾಲಿಸುತ್ತಿದ್ದೇವೆ ಎಂದು ಹೇಳಿದಾಗ ನೀನು ಹೆಚ್ಚಿಗೆ ಮಾತನಾಡಬೇಡ ಎಸ್ಪಿ ಜೊತೆಗೆ ನಾನು ಮಾತನಾಡುತ್ತೇನೆ. ರೂಲ್ಸ್ ಬಗ್ಗೆ ಮಾತನಾಡಿದರೆ ಮನೆಗೆ ಕಳುಹಿಸುತ್ತೇನೆ. ನಾನು ಲೋಕಲ್ ಬಂದ್ರೆ ನನಗೆ ಫೈನ್ ಹಾಕು ಸ್ಥಳೀಯರಿಗೆ ಏಕೆ ತಂಡ ಹಾಕುತ್ತಿದ್ದೀರಾ ನಾನು ಶಾಸಕನಾಗಿದ್ದಾಗ ಈ ರೀತಿ ಮಾಡುತ್ತಿದ್ರಾ ಎಂದು ಪ್ರಶ್ನಿಸಿದ್ದಾರೆ.