ರಾಮನಗರ: ಉಚಿತವಾಗಿ ಶಾಲಾ ಮಕ್ಕಳಿಗೆ ಮಲ್ಲಕಂಬ ತರಬೇತಿ ನೀಡುವ ಮತ್ತು ತರಬೇತುದಾರರ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.
ಖೇಲೋ ಇಂಡಿಯಾ ಕೇಂದ್ರ, ರಾಮನಗರ ಜಿಲ್ಲೆಯ ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆಯ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ದ ಸಹಯೋಗದಲ್ಲಿ ಕರ್ನಾಟಕ ಸಾಹಸ ಕಲಾ ಅಕಾಡೆಮಿಯಲ್ಲಿ ಖೇಲೋ ಇಂಡಿಯಾ ಕೇಂದ್ರವನ್ನು ಸ್ಥಾಪಿಸಲು ಅನುಮತಿ ದೊರೆತಿದ್ದು, ಇದರ ಅಡಿಯಲ್ಲಿ ಶಾಲಾ ಮಕ್ಕಳಿಗೆ ಮಲ್ಲಕಂಬ ತರಬೇತಿ ನೀಡಲು ರಾಜ್ಯ ಮಟ್ಟದ ತರಬೇತಿಗೆ ಈ ಸಂಸ್ಥೆಯು ಮಾನ್ಯತೆ ಪಡೆದಿರುತ್ತದೆ.
ಶಾಲಾ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿದ್ದು, 14 ರಿಂದ 16 ವರ್ಷದ ವಯಸ್ಸಿನ ಗಂಡು/ ಹೆಣ್ಣು ಮಕ್ಕಳು ತರಬೇತಿ ಪಡೆಯಬಹುದಾಗಿದೆ. ಈ ಸಂಬAಧ ನುರಿತ ತರಬೇತುದಾರರು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಮನಗರ ಜಿಲ್ಲೆ ಇವರನ್ನು ಖುದ್ದಾಗಿ ಅಥವಾ 9483501854 ಗೆ ಸಂಪರ್ಕಿಸುವAತೆ ರಾಮನಗರ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.