ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಕ್ಷೇತ್ರದಲ್ಲೇ ಲಂಚಾವತಾರ ತಾಂಡವವಾಡುತ್ತಿದೆ. ಇಲ್ಲೊಬ್ಬ ತಹಶೀಲ್ದಾರ್ ಕಚೇರಿಯ ಎಸ್ ಡಿಎ ಸಿಬ್ಬಂದಿಯೊಬ್ಬರು ಪೋನ್ ಪೇ ಮೂಲಕವೇ ಲಂಚದ ಹಣವನ್ನು ಸ್ವೀಕರಿಸಿರೋ ಗಂಭೀರ ಆರೋಪ ಕೇಳಿ ಬಂದಿದೆ.
ಮಾಹಿತಿ ಹಕ್ಕು ಕಾಯ್ದೆ 2005ರ ಅನುಸಾರವಾಗಿ ಶಿವಮೊಗ್ಗದ ಗಾಡಿ ಕೊಪ್ಪದ ಎಲ್.ಅಭಿಷೇಕ್ ಎಂಬುವರು, ಗಾಡಿಕೊಪ್ಪ ಗ್ರಾಮ ಸರ್ವೇ ನಂಬರ್ 13, 14, 10 ಹಾಗೂ 11ರ ಮೈಲಾರಪ್ಪ, ಯಶವಂತ ಪವಾರ್ ಅವರಿಗೆ ಸೇರಿದಂತೆ ಸಂಪೂರ್ಣ ದಾಖಲೆ, ಪಹಣಿ, ಎಂ ಆರ್ ಮತ್ತು ಮ್ಯುಟೇಷನ್ ಗಳ ಪ್ರತಿಯನ್ನು ದೃಢೀಕರಿಸಿ ನೀಡುವಂತೆ ಕೋರಿದ್ದರು.
ಮೇ.13ರಂದು ಆರ್ ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಂತ ಅಭಿಷೇಕ್ ಗೆ ತಹಶೀಲ್ದಾರ್ ಕಚೇರಿಯ ಎಸ್ ಡಿಎ ಅಭಿನಂದನ್ ಕಳಿಸಿರಲಿಲ್ಲ. ಅಲ್ಲದೇ ಇಂದು, ನಾಳೆ ಅಂತ ಸುಳ್ಳು ಹೇಳುತ್ತಾ ಬಂದಿದ್ದಾರೆ. ಕೊನೆಗೆ ಮತ್ತೊಂದು ಅರ್ಜಿ ಸಲ್ಲಿಸುವಂತೆ ಸೂಚಿಸಿದಾಗ ಮೇ.31ರಂದು ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.
ಶಿವಮೊಗ್ಗ ತಹಶೀಲ್ದಾರ್ ಕಚೇರಿಯ ಎಸ್ ಡಿಎ ಅಭಿನಂದನ್ ಜುಲಾಕಿ ಅವರು ಅಭಿಷೇಕ್ ಸಲ್ಲಿಸಿದ್ದಂತ ಆರ್ ಟಿಐ ಅರ್ಜಿಯ ಮಾಹಿತಿ ನೀಡೋದಕ್ಕೆ ರೂ.1,500 ಲಂಚ ನೀಡುವಂತೆ ಒತ್ತಾಯಿಸಿದ್ದಾರೆ. ಅದರಂತೆ ಹಣವನ್ನು ಪೋನ್ ಪೇ ಮೂಲಕ ಪಡೆದಿದ್ದಾರೆ.
ಇದೀಗ ಲಂಚ ಸ್ವೀಕರಿಸಿದಂತ ತಹಶೀಲ್ದಾರ್ ಕಚೇರಿಯ ಎಸ್ ಡಿಎ ಅಭಿನಂದನ್ ಜುಲಾಕಿ ಅವರನ್ನು ಅಮಾನತುಗೊಳಿಸಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಗಾಡಿಕೊಪ್ಪದ ನಿವಾಸಿ ಎಲ್ ಅಭಿಷೇಕ್ ಆಗ್ರಹಿಸಿದ್ದಾರೆ. ಹೀಗಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅಭಿನಂದನ್ ಜುಲಾಕಿ ಅಮಾನತುಗೊಳಿಸಿ, ಕಾನೂನು ಕ್ರಮ ಕೈಗೊಳ್ಳಲಿದ್ದಾರಾ ಅಂತ ಕಾದು ನೋಡಬೇಕಿದೆ.
‘ಸಚಿವೆ ಲಕ್ಷ್ಮೀ ಹೆಬ್ಬಾಳಕರ್’ ಅವರು ‘ಮಾರ್ಡನ್ ಇಂದಿರಾಗಾಂಧಿ’: ವಿನಯ ಗುರೂಜಿ ಶ್ಲಾಘನೆ
ಭಾರತ-ಅಮೆರಿಕ ನಡುವಿನ ‘ಸಮತೂಕದ ತೆರಿಗೆ ಒಪ್ಪಂದ’ ಜೂನ್ 30ರವರೆಗೆ ವಿಸ್ತರಣೆ