ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು ನೋಡಲು ಇದೀಗ ಜೈಲಿನ ಬಳಿ ರಾಜ್ಯದ ಅನೇಕ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅವರನ್ನು ಭೇಟಿಯಾಗಲು ಆಗಮಿಸುತ್ತಿದ್ದಾರೆ. ಈ ವಿಷಯ ತಿಳಿದು ನಟ ದರ್ಶನ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದು, ನನ್ನ ಭೇಟಿ ಮಾಡಲು ಯಾರು ಜೈಲಿನ ಬಳಿಗೆ ಬರಬೇಡಿ ಎಂದು ಸಂದೇಶ ರವಾನಿಸಿದ್ದಾರೆ.
ಹೌದು ನಟ ದರ್ಶನ್ ಜೈಲು ಸೇರುತ್ತಿದ್ದಂತೆ ಇತ್ತ ಅವರ ಅಭಿಮಾನಿಗಳು ಅನೇಕ ಸಂಖ್ಯೆಯಲ್ಲಿ ಅವರನ್ನು ಭೇಟಿ ಆಗಿಲು ಪರಪ್ಪನ ಅಗ್ರಹಾರ ಜೈಲು ಬಳಿ ಜಮಾಯಿಸಿದ್ದಾರೆ. ಈ ವಿಷಯ ತಿಳಿದು ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ದರ್ಶನ್ ಸಂದೇಶ ರವಾನಿಸಿದ್ದು, ಪರಪ್ಪನ ಅಗ್ರಹಾರ ಜೈಲಿನ ಬಳಿ ಅಭಿಮಾನಿಗಳು ಯಾರು ಕೂಡ ಬರಬೇಡಿ.ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಬೇಟಿ ಅಸಾಧ್ಯ ಎಂದು ಮನವಿ ಮಾಡಿದ್ದಾರೆ.
ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು. ನನ್ನ ಭೇಟಿಗೆ ಅವಕಾಶ ಸಿಗದೇ ನಿರಾಸೆಯಿಂದ ಹಿಂದಿರುಗುವುದು ಬೇಡ. ನಿನ್ನೆ ವಿಶೇಷ ಚೇತನ ಯುವತಿ ಸೌಮ್ಯ ಭೇಟಿಗೆ ಆಗಮಿಸಿದ್ದ ಬಗ್ಗೆ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ. ಜೈಲಿನ ಬಳಿ ಬಂದು ನಟ ದರ್ಶನ್ ಭೇಟಿಗೆ ಸೌಮ್ಯ ಹಠ ಹಿಡಿದಿದ್ದಳು. ಅನ್ನ ಆಹಾರ ಸೇವಿಸದೆ ಹಠಮಾಡಿ ದರ್ಶನ್ ಭೇಟಿಗೆ ಸೌಮ್ಯ ಬಂದಿದ್ದಳು. ದರ್ಶನ್ ಕೊಡಿಸಿದ್ದ ಆಟೋದಲ್ಲಿ ಪೋಷಕರ ಜೊತೆ ಸೌಮ್ಯ ಬಂದಿದ್ದಳು.ಸೌಮ್ಯ ಜೈಲಿನ ಬಳಿ ಆಗಮಿಸಿದ ವಿಚಾರ ತಿಳಿದು ನಟ ದರ್ಶನ್ ಬೇಸರಗೊಂಡಿದ್ದಾರೆ.
ಅಲ್ಲದೆ ಮೂರು ದಿನಗಳ ಹಿಂದೆ ಯಾದಗಿರಿಯಿಂದ ಸೂರ್ಯಕಾಂತ ಎಂಬ ವಿಶೇಷ ಚೇತನ ಆಗಮಿಸಿದ್ದ. ಥ್ರೀ ವೀಲರ್ ಬೈಕ್ ನಲ್ಲಿ ಜೈಲಿನ ಬಳಿ ಆಗಮಿಸಿದ್ದ ಎಲ್ಲ ವಿಚಾರ ತಿಳಿದು ಅಭಿಮಾನಿಗಳಿಗೆ ನಟ ದರ್ಶನ್ ಮನವಿ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಜೇಲಿನಿಂದಲೇ ಕೊಲೆ ಆರೋಪಿ ನಟ ದರ್ಶನ್ ಮನವಿ ಮಾಡಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.