ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ಜಲಾವೃತವಾಗಿದ್ದು ರಸ್ತೆಗಳೆಲ್ಲ ನದಿಗಳಂತಹ ಆಗಿವೆ ಈ ವೇಳೆ ದೆಹಲಿಯ ಏರ್ಪೋರ್ಟ್ ಮೇಲ್ಚಾವಣಿ, ಕುಸಿದು ಬಿದಿದ್ದು, ಐಟಿ ಅಧಿಕಾರಿಯ ಕಾರಿನ ಬೆಲೆ ಮೇಲ್ಚಾವಣಿ ಕುಸಿದುಬಿಟ್ಟಿದೆ ಈ ವೇಳೆ ನಾಲ್ವರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಹೌದು ತಡರಾತ್ರಿ ಸುರಿದ ಮಳೆಗೆ ರಾಷ್ಟ್ರ ರಾಜಧಾನಿ ಸಂಪೂರ್ಣವಾಗಿ ಜಲಾವೃತವಾಗಿದ್ದು ಎಲ್ಲೆಲ್ಲೂ ನೀರು ಹರಿಯುತ್ತಿದ್ದೂ, ದೆಹಲಿಯ ರಸ್ತೆಗಳು ನದಿಯಂತಾಗಿವೆ. ಈ ವೇಳೆ ಐಟಿ ಅಧಿಕಾರಿ ಕಾರಿನ ಮೇಲೆ ಮೇಲ್ಚಾವಣಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದ್ದು ನಾಲ್ವರಿಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿ ಏರ್ಪೋರ್ಟ್ ನ ಟರ್ಮಿನಲ್ 1 ರಲ್ಲಿ ಘಟನೆ ಸಂಭವಿಸಿದೆ. ದೆಹಲಿಯಲ್ಲಿ ಭಾರಿ ಮಳೆಗೆ ಏರ್ಪೋರ್ಟ್ ಮೇಲ್ಚಾವಣಿ ಕುಸಿದು ಬಿದ್ದಿದೆ.