ನವದೆಹಲಿ : ದೇಶದ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಆಮಂತ್ರಣ ಪತ್ರಿಕೆಯ ಮೊದಲ ನೋಟ ಬಹಿರಂಗವಾಗಿದೆ. ಅನಂತ್ ಮತ್ತು ರಾಧಿಕಾ ಅವರ ವಿವಾಹದ ಕಾರ್ಡ್’ನ್ನ ಕೆಂಪು ವಾರ್ಡ್ರೋಬ್ ಆಕಾರದಲ್ಲಿ ಹೆಚ್ಚಿನ ವಿವರ ಮತ್ತು ಸೃಜನಶೀಲತೆಯೊಂದಿಗೆ ರಚಿಸಲಾಗಿದೆ. ಇನ್ನಿದನ್ನ ತೆರೆದಾಗ, ಅದರೊಳಗೆ ಬೆಳ್ಳಿಯ ದೇವಾಲಯವನ್ನ ಕಾಣಬಹುದು, ಇದರಲ್ಲಿ ಗಣೇಶ, ರಾಧಾ-ಕೃಷ್ಣ, ವಿಷ್ಣು-ಲಕ್ಷ್ಮಿ ಮತ್ತು ದುರ್ಗಾ ದೇವಿಯ ವಿಗ್ರಹಗಳ ದೈವಿಕ ನೋಟವನ್ನ ಕಾಣಬಹುದು. ದೇವಾಲಯದ ಮೇಲ್ಭಾಗದಲ್ಲಿ ಸಣ್ಣ ಗಂಟೆಗಳಿವೆ. ಇನ್ನು ನಿಜವಾದ ಬೆಳ್ಳಿಯಿಂದ ಕಾರ್ಡ್ ರಚಿಸಲಾಗಿದೆ.
ಈ ಮದುವೆಯ ಕಾರ್ಡ್ನಲ್ಲಿ ಬೆಳ್ಳಿ ದೇವಾಲಯ ಮತ್ತು ದೇವರು ಮತ್ತು ದೇವತೆಗಳ ನೋಟದ ಜೊತೆಗೆ, ಬೆಳ್ಳಿಯ ಅಕ್ಷರವನ್ನ ಸಹ ನೋಡಬಹುದು, ಇದರಲ್ಲಿ ಮದುವೆಗೆ ಸಂಬಂಧಿಸಿದ ಎಲ್ಲಾ ಘಟನೆಗಳ ಬಗ್ಗೆ ಮಾಹಿತಿಯನ್ನ ನೀಡಲಾಗಿದೆ. ಮೊದಲ ಪುಟದಲ್ಲಿ ನಾರಾಯಣನು ರಾಧಿಕಾ ಮತ್ತು ಅನಂತ್ ಅವರನ್ನ ಆಶೀರ್ವದಿಸುವ ಚಿತ್ರವಿದೆ. ಇದರ ನಂತರ, ವಧು ಮತ್ತು ವರನ ಬಗ್ಗೆ ರೆಡ್ ನೋಟ್ ಬರೆಯಲಾಗಿದೆ. ನಂತರ ಪೆಟ್ಟಿಗೆಯ ಕೆಳಭಾಗದಲ್ಲಿ ಮದುವೆಯ ಉಡುಗೊರೆಗಳಿವೆ.
ವೈರಲ್ ವಿಡಿಯೋ ನೋಡಿ.!
Unboxing the wedding card for Anant Ambani and Radhika Merchant's world's costliest wedding! pic.twitter.com/p3GnYSjkp2
— DealzTrendz (@dealztrendz) June 26, 2024
“ಮುಂಬರುವ ಬಜೆಟ್’ನಲ್ಲಿ ಐತಿಹಾಸಿಕ ಹೆಜ್ಜೆ” : ಸಂಸತ್ತಿನಲ್ಲಿ ರಾಷ್ಟ್ರಪತಿ ‘ಮುರ್ಮು’ ಭಾಷಣದ ಹೈಲೆಟ್ಸ್ ಇಲ್ಲಿದೆ!
ಮೊದಲ ಬಾರಿಗೆ ‘ಜಾಗತಿಕ ಮಹಿಳಾ ಸಂಸತ್ ಸದಸ್ಯರ ಸಮ್ಮೇಳನ’ದಲ್ಲಿ ಭಾಗವಹಿಸಿದ ಭಾರತೀಯ ಪ್ರತಿನಿಧಿಗಳು
ಪ್ರತಿದಿನ ಮಲ್ಟಿವಿಟಮಿನ್ ಗಳನ್ನು ತೆಗೆದುಕೊಳ್ಳುವುದರಿಂದ ಜನರು ಹೆಚ್ಚು ಕಾಲ ಬದುಕಲು ಸಹಾಯ ಮಾಡುವುದಿಲ್ಲ: ಅಧ್ಯಯನ